Friday, April 10, 2020

ಕೊರೊನಾವೈರಸ್ ಸಮಯದಲ್ಲಿ ನಿಮ್ಮ ವ್ಯವಹಾರಕ್ಕಾಗಿ ಕಾಂಟೆಂಟ್ (Content) ಏಕೆ ಅತ್ಯಾವಶಕವಾಗಿದೆ?

ಕೊರೊನಾವೈರಸ್ ಅಥವಾ COVID -19 ಏಕಾಏಕಿ ಉಂಟಾದ ಕಾರಣ, ಹೆಚ್ಚಿನ ಕಂಪನಿಗಳು ಹಿನ್ನಡೆ ಅನುಭವಿಸುತ್ತಿವೆ. ವೇಗವಾಗಿ ಹರಡುವ ಕೊರೊನಾವೈರಸ್ನೊಂದಿಗೆ ಎಲ್ಲಾ ವ್ಯವಹಾರಗಳು ದೂರದಿಂದಲೇ ಕೆಲಸ ಮಾಡಲು ಪ್ರಾರಂಭಿಸಿವೆ. ಅಗತ್ಯ ಟೆಕ್ ಅಥವಾ ಮಾರ್ಕೆಟಿಂಗ್ ಸಮ್ಮೇಳನಗಳನ್ನು ರದ್ದುಗೊಳಿಸಲಾಗುತ್ತಿದೆ. ಪ್ರತಿಯೊಂದು ಉದ್ದಿಮೆಯೂ ಪ್ರಗತಿ ಮತ್ತು ದಕ್ಷತೆಯನ್ನು ಸಾಧಿಸಲು ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ ಮತ್ತು ಪ್ರಯತ್ನಿಸುತ್ತಿದೆ. ತಮ್ಮ ಸಾಂಪ್ರದಾಯಿಕ ಮಾರುಕಟ್ಟೆ ತಂತ್ರಗಳನ್ನು ತಡೆಹಿಡಿಯಲಾಗಿರುವುದರಿಂದ ಮಾರ್ಕೆಟಿಂಗ್ ಕಂಪನಿಗಳು ವಿಪರೀತ ಪರಿಣಾಮಗಳನ್ನು ಎದುರಿಸುತ್ತಿವೆ.


ಈ ಕಠಿಣ ಸಮಯದಲ್ಲಿ ನಿಮ್ಮ ವ್ಯವಹಾರವನ್ನು ಆ ಕ್ಷೇತ್ರದಲ್ಲಿ ದೃಡವಾಗಿರಿಸಲು, ಪ್ರಗತಿಯನ್ನು ಸಾಧಿಸಲು ಮತ್ತು ನಷ್ಟವನ್ನು ತಡೆಯಲು, ಕಾಂಟೆಂಟ್(content) ಸಂರಕ್ಷಕನೆಂದು ಸಾಬೀತಾಗಿದೆ. ನಿಮ್ಮ ವ್ಯಾಪಾರವು ಮುಳುಗದಂತೆ ಉಳಿಸಲು ಕಾಂಟೆಂಟ್ ಮಾರ್ಕೆಟಿಂಗ್ (Content  Marketing) ಸಹಾಯ ಮಾಡುತ್ತದೆ. 

ಮೊದಲಿಗೆ ನಾವು ಕಾಂಟೆಂಟ್ ಮಾರ್ಕೆಟಿಂಗ್ (Content Marketing) ಎಂದರೆ ಏನೆಂದು ತಿಳಿದುಕೊಳ್ಳೋಣ

ಕಾಂಟೆಂಟ್ (content) ಮಾರ್ಕೆಟಿಂಗ್ ಎನ್ನುವುದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಇರುವಂತಹ ಅಮೂಲ್ಯವಾದ ಸಾಧನವಾಗಿದೆ. ಗ್ರಾಹಕರಿಗೆ ಬೇಕಾದ ವಿಷಯವನ್ನು ರಚಿಸುವ ಮತ್ತು ವಿತರಿಸುವ ಅತ್ಯಂತ ಉಪಯುಕ್ತ ಮಾರ್ಗ ಅಥವಾ ಕಾರ್ಯತಂತ್ರ ಈ ಕಾಂಟೆಂಟ್ ಮಾರ್ಕೆಟಿಂಗ್ ವಿಧಾನವಾಗಿದೆ. ಇದಲ್ಲದೆ ಈ ಮಾರ್ಗವು ಲಾಭದಾಯಕವಾಗಿದ್ದು ಗ್ರಾಹಕರ ಒಡನಾಟವನ್ನು ಹೆಚ್ಚಿಸುತ್ತದೆ.

ನಿಮ್ಮ ಗ್ರಾಹಕರೊಂದಿಗೆ  ಎಂತಹದ್ದೇ ಪರಿಸ್ಥಿಯಲ್ಲೂ ನೇರವಾಗಿ ಸಂಪರ್ಕ ಸಾಧಿಸಲು ಪರಿಣಾಮಕಾರಿಯಾದ ಕಾಂಟೆಂಟ್ ಮಾರ್ಕೆಟಿಂಗ್ ನಿಮಗೆ ಸಹಾಯ ಮಾಡುತ್ತದೆ. ಗ್ರಾಹಕರೊಂದಿಗೆ ನೀವು ಎಷ್ಟು ಸಂಪರ್ಕದಲ್ಲಿ ಇರುತ್ತಿರೋ ಅಷ್ಟೇ ಉತ್ತಮವಾಗಿ ನಿಮ್ಮ ವ್ಯವಹಾರ ನಡೆಯುವುದರಲ್ಲಿ ಸಂಶಯವೇಯಿಲ್ಲ.

ಈ COVID-19 ಸಾಂಕ್ರಾಮಿಕವು ಪ್ರತಿ ವಲಯಕ್ಕೂ ಬಿಕ್ಕಟ್ಟನ್ನು ತರುತ್ತಿರುವಾಗ, ನಿಮ್ಮ ವ್ಯವಹಾರದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲು, ನಿಮ್ಮ ಗ್ರಾಹಕರನ್ನು ಪ್ರೇರೇಪಿಸಲು, ಶಿಕ್ಷಣ ನೀಡಲು ಮತ್ತು ತೊಡಗಿಸಿಕೊಳ್ಳಲು ಕಾಂಟೆಂಟ್ ಸಹಾಯ ಮಾಡುತ್ತದೆ. COVID-19 ಸಾಂಕ್ರಾಮಿಕ ಸಮಯದಲ್ಲಿ ಅಥವಾ ನಂತರವೂ ಕಾಂಟೆಂಟ್ ಮಾರ್ಕೆಟಿಂಗ್ (content marketing) ಗ್ರಾಹಕರೊಂದಿಗೆ ನಿರಂತರ ಸಂಬಂಧವನ್ನು ಸ್ಥಾಪಿಸಲು ಸಹಾಯಕವಾಗಿರುತ್ತದೆ. 

ನೀವು ಉತ್ತಮ ಕಾಂಟೆಂಟ್ ಮಾರ್ಕೆಟಿಂಗ್ ತಂತ್ರವನ್ನು ಅನುಸರಿಸಿದರೆ, ಪರಿಸ್ಥಿತಿ ಏನೇ ಇರಲಿ, ನಿಮ್ಮ ವ್ಯಾಪಾರವು ನಿರಂತರವಾಗಿ ನಡಿಯುತ್ತಲೇ ಇರುತ್ತದೆ ಅದಲ್ಲದೆ ನೀವು ನಿಮ್ಮ ಗ್ರಾಹಕರೊಂದಿಗೆ ಸದಾ ಸಂಪರ್ಕದಲ್ಲಿರಬಹುದು. 

ಸಾಂಪ್ರದಾಯಿಕ ಕಾರ್ಯತಂತ್ರದ ಚಾನೆಲ್‌ಗಳ ಮೂಲಕ ಮಿಂಚುವ ಮಾರುಕಟ್ಟೆದಾರರಿಗೆ ಕೊರೊನಾವೈರಸ್ ಹೊಸ ಸವಾಲನ್ನು ಎಸೆದಿದೆ. ಕಷ್ಟದ ಸಮಯದಲ್ಲಿ, ಬ್ರ್ಯಾಂಡ್ ಮೌಲ್ಯಗಳು ಮತ್ತು ಗುರುತುಗಳನ್ನು ಸಂವಹನ ಮಾಡುವುದು ನಿರ್ಣಾಯಕವಾಗಿದೆ. ಪ್ರತಿಯೊಂದು ವ್ಯವಹಾರವು ತಮ್ಮ ಗ್ರಾಹಕರಿಗೆ ತಮ್ಮ ಬ್ರ್ಯಾಂಡ್ ಇನ್ನೂ ಲಭ್ಯವಿದೆ ಮತ್ತು ವ್ಯಾಪಾರವನ್ನು ನಿರೀಕ್ಷಿಸುತ್ತಿದೆ ಎಂದು ತಿಳಿಸಬೇಕಾಗಿರುವುದು ತೀರಾ ಅವಶ್ಯಕ. ಲಾಕ್‌ಡೌನ್‌ಗಳು ಮತ್ತು ಆರೋಗ್ಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಪನಿಗಳು ಸಕ್ರಿಯವಾಗಿರಲು ಕಾಂಟೆಂಟ್ ಮಾರ್ಕೆಟಿಂಗ್ ಸಹಾಯ ಮಾಡುತ್ತದೆ.


ಕಾಂಟೆಂಟ್ (Content) ಏಕೆ ಮುಖ್ಯವಾಗುತ್ತದೆ?

ಬದಲಾಗುತ್ತಿರುವ ಮಾರ್ಕೆಟಿಂಗ್ ಪದ್ದತಿಯಿಂದಾಗಿ, ಗ್ರಾಹಕರು ತಮ್ಮ ವ್ಯವಹಾರ ವಿಧಾನವನ್ನು ಬದಲಾಯಿಸುತ್ತಿದ್ದಾರೆ. ಗ್ರಾಹಕರು ಕಂಪನಿಗಳ ಮೌಲ್ಯ, ಪರಿಣತಿ, ವಿಶ್ವಾಸಾರ್ಹತೆ ಮತ್ತು ತಾವು ಕಷ್ಟಪಟ್ಟು ಸಂಪಾದಿಸಿದ ಹಣದ ಮೌಲ್ಯದ ಮೇಲೆ ಬೆಳಕು ಚೆಲ್ಲುವ ಮಾಹಿತಿಯನ್ನು ಹುಡುಕುತ್ತಾರೆ. ಆದ್ದರಿಂದ ಅವರು ನಿಮ್ಮ ಕಂಪನಿ ಮತ್ತು ನಿಮ್ಮ ಉತ್ಪನ್ನಗಳು/ಸೇವೆಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆಯಲು ನಿಮ್ಮ ವೆಬ್ ಸೈಟಿಗೆ ಭೇಟಿ ಕೊಡುತ್ತಾರೆ  ಈ ಸಂಧಾರ್ಭದಲ್ಲಿ ನಿಮ್ಮ ವೆಬ್‌ಸೈಟ್‌ನಲ್ಲಿ ಅತ್ಯುತ್ತಮ ಕಾಂಟೆಂಟ್ ಇರುವುದು ತೀರಾ ಅಗತ್ಯವಾಗಿರುತ್ತದೆ. ಇದರ ಜೊತೆಗೆ ಸರಿಯಾದ ಕಾಂಟೆಂಟ್ ತಂತ್ರವನ್ನು ಅಳವಡಿಸಿಕೊಳ್ಳುವುದರಿಂದ ಆನ್‌ಲೈನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಬಹುದಲ್ಲದೆ ತಿಳಿವಳಿಕೆಯನ್ನು ಕೊಡಬಹುದಾಗಿದೆ. ಇದು ಕಂಪನಿಯ ಗ್ರಾಹಕರನ್ನು ಮತ್ತು ಮಾರಾಟವನ್ನು ಹೆಚ್ಚಿಸುತ್ತದೆ.




ಕಾಂಟೆಂಟ್ ಮಾರ್ಕೆಟಿಂಗ್ (Content Marketing) ದೊಡ್ಡ ಉದ್ಯಮಗಳಿಗೆ ಸೀಮಿತವಾದದ್ದೇ?

ಇಲ್ಲ, ಕಾಂಟೆಂಟ್ ಮಾರ್ಕೆಟಿಂಗ್ (Content Marketing) ಬರೀ ದೊಡ್ಡ ಉದ್ಯಮಗಳಿಗೆ ಸೀಮಿತವಾದದ್ದಲ್ಲ, ಈ ತಂತ್ರವನ್ನು ಚಿಕ್ಕ ಉದ್ಯಮಗಳು ಕೂಡ ಅಳವಡಿಸಿಕೊಳ್ಳಬಹುದಾಗಿದೆ. ಸಣ್ಣ ಉದ್ಯಮಗಳು ಈ ಸಾಂಕ್ರಾಮಿಕದ ಮಧ್ಯೆ ಆನ್‌ಲೈನ್‌ನಲ್ಲಿ ಲಭ್ಯವಾಗುವುದರ ಮೂಲಕ ಮತ್ತು ತಮ್ಮ ವ್ಯವಹಾರ ಮತ್ತು ಕೆಲಸದ ರಚನೆಯ ಬಗ್ಗೆ ಪರಿಣಾಮಕಾರಿ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಬ್ರ್ಯಾಂಡ್ ಗುರುತನ್ನು ರಚಿಸಲು, ನಿರ್ಮಿಸಲು ಮತ್ತು ಸುಧಾರಿಸಲು ಅವಕಾಶವನ್ನು ಕಾಣಬಹುದು. ಸಣ್ಣ ವ್ಯವಹಾರಗಳಿಗೆ ಕಾಂಟೆಂಟ್ ಮಾರ್ಕೆಟಿಂಗ್ ಮತ್ತು ಜಾಹೀರಾತು ಏಕೆ ಬೇಕು ಎನ್ನುವುದಕ್ಕೆ ಇದು ಬಹುಶಃ ಉತ್ತಮ ಕಾರಣವಾಗಿದೆ.


ಕಾಂಟೆಂಟ್ ಮಾರ್ಕೆಟಿಂಗ್ (Content Marketing) ಹೇಗೆ ಸಹಾಯಕವಾಗಿದೆ?

ನಿರ್ಣಾಯಕ ಸಮಯದಲ್ಲಿ ವ್ಯವಹಾರವು ಪ್ರಸ್ತುತವಾಗಲು ಸಾಧ್ಯವಾದರೆ ಗ್ರಾಹಕರು ಅಂತಹ ಕಂಪನಿಯೊಂದಿಗೆ ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸುತ್ತಾರೆ. ಆದ್ದರಿಂದ ಯಾವುದೇ ವ್ಯಾಪಾರಗಳ ಪ್ರಗತಿಯಲ್ಲಿ ಕಾಂಟೆಂಟ್ ಮಾರ್ಕೆಟಿಂಗ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಣ್ಣ ಮತ್ತು ದೊಡ್ಡ  ವ್ಯವಹಾರಗಳು ಈ ಮೂಲಕ ವ್ಯಾಪಕ ಶ್ರೇಣಿಯ ಪ್ರೇಕ್ಷಕರನ್ನು ಆಕರ್ಷಿಸಬಹುದು, ನೆಟ್‌ವರ್ಕ್‌ಗಳನ್ನು ನಿರ್ಮಿಸಬಹುದು, ಖರೀದಿದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು, ನಿಮ್ಮ ವೆಬ್‌ಸೈಟ್‌ಗೆ ಹಿಂತಿರುಗಲು ಕಾರಣಗಳನ್ನು ನೀಡಬಹುದು, ಪ್ರಸ್ತುತ ಸಂದರ್ಭಗಳಿಗೆ ಹೊಂದಿಕೊಳ್ಳುವ ಸೇವೆಗಳನ್ನು ಕಾರ್ಯಗತಗೊಳಿಸಬಹುದು ಮತ್ತು ಇವೆಲ್ಲವೂ ಕಾಂಟೆಂಟ್ ಮಾರ್ಕೆಟಿಂಗ (Content Marketing) ನೊಂದಿಗೆ ಸಾಧ್ಯ.


ಕಾಂಟೆಂಟ್ ಮಾರ್ಕೆಟಿಂಗ (Content Marketing)ನ ಲಾಭಗಳು ಏನು?

  • ಇದು ವಿಶ್ವಾಸವನ್ನು ಬೆಳೆಸುತ್ತದೆ
  • ನಿಮ್ಮ ಉತ್ಪನ್ನಗಳು/ಸೇವೆಗಳ ಬಗ್ಗೆ ಪ್ರಕಟಿಸುವುದರಿಂದ ಬ್ರ್ಯಾಂಡ್ ಅರಿವು ಮೂಡಿಸಬಹುದು
  • ಈ ತಾಂತ್ರಿಕತೆಯು ನಿಮ್ಮವಿಷಯ-ಪರಿಣತಿಯನ್ನು ತೋರಿಸುತ್ತದೆ
  • ಬಯಸಿದ ಪ್ರೇಕ್ಷಕರನ್ನು ಗುರಿಯಾಗಿಸಬಹುದು
  • ನಿಮ್ಮ ಗ್ರಾಹಕರೊಂದಿಗೆ ನೇರ ಸಂವಾದ ನಡೆಸುವುದು ಸುಲಭವಾಗುತ್ತದೆ
  • ಹೊಸ ಅವಕಾಶಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ
  • ಗ್ರಾಹಕರ ಹೊಸ ನೆಟ್‌ವರ್ಕ್ ರಚಿಸಲು ದಾರಿಮಾಡಿಕೊಡುತ್ತದೆ

ಹಾಗಿದ್ದಲ್ಲಿ ಇನ್ನೇಕೆ ತಡ, ನಿಮ್ಮ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಬೆಳೆಸಲು ಮತ್ತು ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸಲು ನೀವು ಖಂಡಿತವಾಗಿಯೂ ಕಾಂಟೆಂಟ್ ಮಾರ್ಕೆಟಿಂಗ್ ತಂತ್ರವನ್ನು ಕಾರ್ಯಗತಗೊಳಿಸಲು ಇದೇ ಸರಿಯಾದ ಸಮಯ.

Penned By: Saroja Huddar

Comment for Blog
EmoticonEmoticon