ಎಲ್ಲರಿಗು
ಗೊತ್ತಿರುವಂತೆ ಕಳೆದ ಕೆಲವು ದಿನಗಳಿಂದ
ಮಹಾಮಾರಿ ಕೋರೊನಾ ವೈರಸ್ನಿಂದಾಗಿ ಇಡೀ ವಿಶ್ವವೇ ಒಂದುರೀತಿಯಲ್ಲಿ
ನಿಂತು ಹೋದಂತಾಗಿದೆ. ಯಾವುದೇ ಅಂಗಡಿ ಮುಂಗಟ್ಟುಗಳಾಗಲಿ, ಕಾರ್ಖಾನೆಗಳಾಗಲಿ ತಮ್ಮ ದೈನಂದಿನ ಕೆಲಸವನ್ನು
ನಿರ್ವಹಿಸುತ್ತಿಲ್ಲ. ಅನಿಯಮಿತ ಲಾಕ್ಡೌನ್ನಿಂದಾಗಿ ಎಲ್ಲರು ಮನೆಯಲ್ಲೇ ಇರಬೇಕಾಗಿರುವುದು ಅನಿವಾರ್ಯ. ಇಂತಹ ಸಮಯದಲ್ಲಿ ನಿಮ್ಮನ್ನು
ಕಾಡುವ ಎರಡು ಮುಖ್ಯವಾದ ಶತ್ರುಗಳೆಂದರೆ
ಆತಂಕ ಮತ್ತು ಒತ್ತಡ. ಮುಂದೇನು ಎಂಬ ಹೆದರಿಕೆ, ನೌಕರಿಯ
ಗತಿಯೇನುಂಬುದರ ಭಯ, ಈ ಕಠಿಣ
ಸ್ಥಿತಿಯಲ್ಲಿ ಮನೆಯನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ
ಯೋಚನೆ ಇವೆಲ್ಲವು ಮನುಷ್ಯನನ್ನು ಆತಂಕಕ್ಕೆ ಗುರಿಮಾಡುತ್ತವೆ.
COVID-19ನ್ನು
ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದಾಗಿನಿಂದ, ಇಡಿ ವಿಶ್ವವೇ ಸ್ತಬ್ದವಾದಂತಿದೆ.
ಶಾಲಾಕಾಲೇಜುಗಳು, ಕಛೇರಿಗಳು, ಕಾರ್ಖಾನೆಗಳು ಯಾವುದು ಕಾರ್ಯನಿರ್ವಹಿಸುತ್ತಿಲ್ಲ. ತೀವ್ರಗತಿಯಲ್ಲಿ ಹರಡುತ್ತಿರುವ ಈ ಮಹಾಮಾರಿ ಕೋರೊನಾ
ವೈರಸ್ ನಿಂದ ಸುರಕ್ಷಿತವಾಗಿರಲು ಸಾಮಾಜಿಕ
ಅಂತರವನ್ನು ಕಾಯುದುಕೊಳ್ಳುವುದೇ ಒಂದು ಉಪಾಯವಾಗಿರುವುದರಿಂದ ನಾವೆಲ್ಲರೂ ನಮ್ಮ
ನಮ್ಮ ಮನೆಗಳಲ್ಲಿಯೇ ಇದ್ದೇವೆ. ಆದರೆ ನಮಲ್ಲಿ ಬಹಳಷ್ಟು
ಜನ ಈ ಅನಿರ್ದಿಷ್ಟ ಪ್ರತ್ಯೇಕತೆಯಿಂದಾಗಿ
ಆತಂಕ್ಕೆ ಉಂಟಾಗಿದ್ದಾರೆ. ಅವರನ್ನು ಒಂದು ರೀತಿಯ ನಕಾರಾತ್ಮಕ
ಆಲೋಚನೆಗಳು ಆವರಿಸಿದ್ದು ಇಂದರಿಂದಾಗಿ ಹೊರಬರುವುದು ಅತ್ಯಂತ ಅವಶ್ಯಕವಾಗಿದೆ. ಆದರೆ ಹೆದರಬೇಕಾಗಿಲ್ಲ ಇಂತಹ
ಸ್ಥಿತಿಯಲ್ಲಿ ನಮ್ಮನ್ನು ನಾವು ಹೇಗೆ ನಿಯಂತ್ರಿಸಿಕೊಳ್ಳಬೇಕು
ಮತ್ತು ನಕಾರಾತ್ಮಕ ವಿಚಾರಗಳನ್ನು ಹೇಗೆ ದೂರವಿಡಬೇಕೆನ್ನುವುದರ ಬಗ್ಗೆ ಈ
ಕೆಳಗೆ ತಿಳಿಸಲಾಗಿದೆ.
ಮೊದಲನೆಯದಾಗಿ ನಿಮ್ಮ ವಿಚಾರವನ್ನು ಬದಲಿಸಿ
ನಾನು ಮನೆಯಲ್ಲಿ ಸಿಲುಕಿದ್ದೇನೆ ಅಂದುಕೊಳ್ಳುವ ಬದಲಾಗಿ ಈಗ ನಾನು ಮನೆಯ ಕಡೆ ಹೆಚ್ಚು ಗಮನಕೋಡಬಹುದು ಎಂದುಕೊಳ್ಳಿ. ಹಿಂದೆಲ್ಲ ಯಾವಾಗ ರಜೆ ಸಿಗುತ್ತೋ ಅಂತ ಕಾಯುತಿದ್ದ ನಾವು ಈಗ ಸಿಕ್ಕಿರುವ ಸಮಯವನ್ನು ಪರಿವಾರದೊಂದಿಗೆ ಕಳೆಯಬಹುದು. ದಿನನಿತ್ಯದ ಕೆಲಸದ ಒತ್ತಡದಲ್ಲಿ ಸ್ವತದಬಗ್ಗೆ ಕಾಳಜಿವಹಿಸಲು ಬಿಡುವಿರುವುದಿಲ್ಲ ಆದರೆ ಈ ಲಾಕ್ಡೌ ಸಮಯವನ್ನು ನಮಗಾಗಿ ನಾವು ಬಳಸಿಕೊಳ್ಳೋಣ. ದಿನಕ್ಕೆ ಒಂದು ಉತ್ಪಾದಕ ಕೆಲಸವನ್ನು ಮಾಡುವುದರ ಮೂಲಕ ಹೆಚ್ಚು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳೋಣ. ಇನ್ನೂ ಕೆಲವರಿಗೆ ಮನೆಯಿಂದಲೇ ಕೆಲಸಮಾಡುವ ಅವಕಾಶವನ್ನು ನೀಡಲಾಗಿದೆ ಅಂಥವರು ಈ ಸಮಯದಲ್ಲಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ತಮ್ಮ ವೃತ್ತಿಗೆ ಬೇಕಾಗುವ ಕೌಶ್ಯಳವನ್ನು ಬೆಳೆಸಿಕೊಳ್ಳಬಹುದು.

ನಿಮ್ಮ ಸಾಮಾನ್ಯ ದಿನಚರಿಗೆ ಹತ್ತಿರದಲ್ಲಿರಿ
ಮಕ್ಕಳಿರುವ ವ್ಯಕ್ತಿಗಳಿಗೆ, ದಿನಚರಿಗೆ ಅಂಟಿಕೊಳ್ಳುವುದು ಸುಲಭವಾಗಬಹುದು; ಆದರೂ ಮನೆಯಿಂದ ಕೆಲಸ ಮಾಡುವಾಗ, ಇದು ಹೆಚ್ಚು ಆಲಸ್ಯದ ಜೀವನಶೈಲಿಗೆ ಬೀಳಲು ಪ್ರಚೋದಿಸುತ್ತದೆ, ಅದು ನಕಾರಾತ್ಮಕ ಚಿಂತನೆಗೆ ಕಾರಣವಾಗಬಹುದು. ಅದೇ ಸಮಯದಲ್ಲಿ ಎಚ್ಚರಗೊಂಡು ಮಲಗಲು ಹೋಗಿ, ಊಟ ಮಾಡಿ, ಸ್ನಾನ ಮಾಡಿ, ನಿಮ್ಮ ವ್ಯಾಯಾಮವನ್ನು ದಿನನಿತ್ಯ ಮಾಡುವ ಹೊತ್ತಿಗೆ ಮಾಡಿ. ಆಫೀಸಿಗೆ ಹೋಗುವಾಗ ಹೇಗೆ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ದಿನಚರ್ಯವನ್ನು ಮಾಡುತ್ತಿದಿರೋ ಅದೇ ರೀತಿಯಾಗಿ ಮುಂದುವರೆಯಿರಿ. ಎಂದಿನಂತೆ ಭಾನುವಾರದಂದು ಲಾಂಡ್ರಿ ಮಾಡಿ. ನಿಮ್ಮ ಸಾಮಾನ್ಯ ದಿನಚರಿಗೆ ಅಂಟಿಕೊಳ್ಳುವುದು ನಿಮ್ಮನ್ನು ಸಕ್ರಿಯವಾಗಿ ಇಡುವುದಲ್ಲದೆ, ಕೆಲಸಕ್ಕೆ ಮರಳುವ ಸಮಯ ಬಂದಾಗ ಹೊರಗಿನ ಪ್ರಪಂಚಕ್ಕೆ ಮರು ಹೊಂದಾಣಿಕೆ ಆಗುವುದು ಸುಲಭವಾಗುತ್ತದೆ.
ಅಂತ್ಯವಿಲ್ಲದ
ಕೊರೊನಾವೈರಸ ಸುದ್ದಿಗಳಿಂದ ದೂರವಿರಿ
ಮನುಷ್ಯನ ಗುಣವೇ ಹೀಗೆ, ನಿತ್ಯಕ್ರಮಗಳಲ್ಲಿ ಏನಾದರು ವ್ಯತ್ಯಾಸವಾದಾಗ, ಕೆಲಸದಿಂದ ಮತ್ತು ಸಾಮಾಜಿಕ ಕಟ್ಟುಪಾಡುಗಳಿಂದ ದೂರವಿದ್ದಾಗ ನಮಗೆ ಅರಿವಿಲ್ಲದಂತೆ ಸೋಮಾರಿತನ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ಪ್ರತಿ ಸೀನಿಗು, ಕೆಮ್ಮಿಗು ನಿಮಗೇನಾದರೂ ಗೂಗಲ್ ಅನ್ನು ಸಂಪರ್ಕಿಸುವ ಪ್ರವೃತ್ತಿ ಇದ್ದರೆ ಪದೇ ಪದೇ ಕೋರೊನಾ ವೈರಸ್ ಬಗ್ಗೆಯೇ ಮಾಹಿತಿಯನ್ನು ಕಲೆಹಾಕುತಿರುತ್ತಿರಿ. ಇದರಿಂದ ಆಗುಹೋಗುಗಳ ಬಗ್ಗೆಯೇನೋ ತಿಳಿದುಕೊಳ್ಳುತ್ತಿರಿ ಆದರೆ ಅದರ ಜೊತೆಗೆ ನಿಮ್ಮ ರಕ್ತದೊತ್ತಡವನ್ನು ಕೂಡ ಹೆಚ್ಚಿಸಿಕೊಳ್ಳುತ್ತಿರಿ. ಹಾಗಾಗಿ, ಪ್ರತಿ ದಿನ ಸೀಮಿತ ಸಮಯಕ್ಕೆ ಕೆಲವು ವಿಶ್ವಾಸಾರ್ಹ ವೆಬ್ಸೈಟ್ಗಳನ್ನು ಮಾತ್ರ ನೋಡುವುದು ಈ ಸಮಯದಲ್ಲಿ ನಿಮಗೆ ಹಿತಕಾರಿಯಾಗಿರುತ್ತದೆ.

ಅಸ್ತವ್ಯಸ್ತವಾಗಿರುವ ಮನೆ ಅಸ್ತವ್ಯಸ್ತವಾಗಿರುವ ಮನಸ್ಸಿಗೆ ಕಾರಣವಾಗಬಹುದು
ನಿಮ್ಮ ಮನೆಯ ಹೊರಗೆ ಎಲ್ಲಾ ಅನಿಶ್ಚಿತವಾಗಿ ನಡೆಯುತ್ತಿರುವಾಗ, ಒಳಭಾಗವನ್ನು ಸಂಘಟಿತವಾಗಿ, ಅಚ್ಚುಕಟ್ಟಾಗಿ ಮತ್ತು ಸ್ವಚ್ವವಾಗಿಡಿ. ದೈನಂದಿನ ಚಟುವಟಿಕೆಗಳಿಗಾಗಿ ಮಾನಸಿಕ ವಲಯಗಳನ್ನು ಹೊಂದಿಸುವುದು ನಿಮ್ಮ ದಿನವನ್ನು ಸಂಘಟಿಸಲು ಸಹಾಯ ಮಾಡುತ್ತದೆ. ಕೆಲಸದ ಒತ್ತಡದಲ್ಲಿ ಮನೆಯನ್ನು ಶುಚಿಯಾಗಿಟ್ಟು ಕೊಳ್ಳುವುದು ಬಹಳಷ್ಟು ಜನರಿಗೆ ಸಾಧ್ಯವಾಗದೆ ಇದ್ದಿರಬಹುದು ಅಂತವರು ಈ ಲಾಕ್ ಡೌನ್ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುವುದರ ಮೂಲಕ ಮನೆಗೆ ಹೊಸ ಮೆರುಗನ್ನೇ ಕೊಡಬಹುದು.
ಸೃಜನಶೀಲತೆ
ಹೆಚ್ಚಿಸಿಕೊಳ್ಳಲು ಇದು ಸೂಕ್ತವಾದ ಸಮಯ
ಕೋರೊನಾ ವೈರಸ್ನಿಂದಾಗಿ ಸಿಕ್ಕಿರುವ ಈ ಲಾಕ್ ಡೌನ್ ಸಮಯವನ್ನು ನೀವೇಕೆ ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಬಳಸಬಾರದು? ನಿಮಗಿಷ್ಟವಿರುವ ಕೆಲಸವನ್ನು ಇನ್ನು ವಿಶೇಷವಾಗಿ ಏಕೆ ಮಾಡಬಾರದು? ಹೊಸ ರುಚಿಯನ್ನು ಪ್ರಯತ್ನಿಸಿ, ಉನ್ನತ ಕೋರ್ಸಗಳನ್ನು ಆನ್ಲೈನ್ ಮೂಲಕ ಮಾಡಿ, ಚಿತ್ರ ಬಿಡಿಸಿ,ಹಾಡುಗಳನ್ನು ಕಲಿಯಿರಿ ಹೀಗೆ ನಿಮ್ಮಲ್ಲಿರುವ ಕ್ರಿಯಾಶೀಲ ವ್ಯಕ್ತಿಯನ್ನು ಹೊರಗೆ ತನ್ನಿ. ಈ ಸಮಯದಲ್ಲಿ ಏನಾದರೂ ವಿಶೇಷತೆಯನ್ನು ಹೊಂದಿರುವುದರಿಂದ ಪ್ರತಿ ಹೊಸ ದಿನವನ್ನು ಎದುರುನೋಡಬಹುದು.

ನಿಮ್ಮ
ಆತಂಕವನ್ನು ನಿಭಾಯಿಸಲಾಗದಿದ್ದಲ್ಲಿ ವೃತ್ತಿಪರರೊಂದಿಗೆ ಮಾತನಾಡಲು ಟೆಲಿಹೆಲ್ತ್ ಅನ್ನು ಆಯ್ಕೆಯಾಗಿ ಬಳಸಿ
ಅನೇಕ ಪರವಾನಗಿ ಪಡೆದ ಮನಶ್ಶಾಸ್ತ್ರಜ್ಞರು ವಿಡಿಯೋ ಚಾಟ್ ಪ್ಲಾಟ್ಫಾರ್ಮ್ಗಳ ಮೂಲಕ ಟೆಲಿಹೆಲ್ತ್ ಆಯ್ಕೆಗಳನ್ನು ನೀಡುತ್ತಿದ್ದಾರೆ. ನಿಮ್ಮ ಆತಂಕವು ವೃತ್ತಿಪರ ಸಹಾಯವಿಲ್ಲದೆ ನಿರ್ವಹಿಸಲಾಗದ ಅನುಪಾತವನ್ನು ತಲುಪುತ್ತಿದ್ದರೆ ಸಹಾಯಕ್ಕಾಗಿ ತಲುಪಲು ಮರೆಯದಿರಿ. ತಜ್ನ್ಯರೆದುರು ನಿಮ್ಮಲ್ಲಿರುವ ದುಗುಡವನ್ನು ತೋಡಿಕೊಂಡಾಗ ಮನಸು ಹಗುರವಾಗುತ್ತದೆ. ಮನಸು ಶಾಂತವಾದಾಗ ನಿಮ್ಮನ್ನು ನೀವು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಸಂತೋಷವಾಗಿದ್ದರೆ ಮನೆಯವರೆಲ್ಲರು ಸಂತೋಷವಾಗಿರುತ್ತಾರೆ. ಮನೆ ಮತ್ತು ಮನಸಿನಲ್ಲಿ ಶಾಂತಿ ನೆಲೆಸಿದಾಗ ಹೊಸ ಹುರುಪು, ಉತ್ಸಾಹ, ಹುಮಸ್ಸು ಹುಟ್ಟುತ್ತದೆ. ಇದಕ್ಕಾಗಿಯೇ ಅಲ್ಲವೇ ನಾವು ನೀವು ಶ್ರಮ ಪಡುತ್ತಿರುವುದು.

ಈ ಲೊಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಳ್ಳೋಣ ಹಾಗೆಯೆ ಕೋರೊನಾ ವೈರಸ್ ಹರಡದಂತೆ ಎಚ್ಚರಿಕೆವಹಿಸೋಣ.
Penned By: Saroja Huddar
Comment for Blog
EmoticonEmoticon