Saturday, March 21, 2020

ಹೊಸ ಹುರುಪನ್ನು ತರುವ ಯುಗಾದಿ ಹಬ್ಬ

ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಾದ್ಯಂತ ಜನರು ಹೊಸ ವರ್ಷವನ್ನು ಆಚರಿಸಲು ತಯಾರಾಗುತ್ತಿದ್ದಾರೆ. ಗುಡಿ ಪಾಡ್ವಾ ಎಂದೂ ಕರೆಯಲ್ಪಡುವ ಯುಗಾದಿ ಹಬ್ಬವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.

ಯುಗಾದಿ ಎನ್ನುವ ಶಬ್ದವುಯುಗಮತ್ತುಅದಿಎನ್ನುವ ಎರಡು ಸಂಸ್ಕೃತ ಪದಗಳಿಂದ ಕೂಡಿದ್ದಾಗಿದ್ದು ಹಬ್ಬವು ಹೊಸ ಯುಗದ ಪ್ರಾರಂಭವನ್ನು ಸೂಚಿಸುತ್ತದೆ. ಮಾರ್ಚ್ ಅಥವಾ ಏಪ್ರಿಲಿನಲ್ಲಿ ಬರುವ ಹಬ್ಬವನ್ನು ಚಾಂದ್ರಮಾನ ಯುಗಾದಿಯೆಂತಲೂ ಕರೆಯುತ್ತಾರೆ. ಹಬ್ಬವನ್ನು ಸುಗ್ಗಿಯ ಹಬ್ಬವೆಂದು ಕೂಡ ಆಚರಿಸಲಾಗುತ್ತದೆ.


ಯುಗಾದಿ ಹಬ್ಬವನ್ನು ಎಲ್ಲ ವರ್ಗದ ಜನರು ತುಂಬೂ ಉತ್ಸಾಹದಿಂದ ಮತ್ತು ಲವಲವಿಕೆಯಿಂದ ಆಚರಿಸುತ್ತಾರೆ. ಚೈತ್ರ ಮಾಸದಲ್ಲಿ ಬರುವ ಹಬ್ಬವು ಜನರ ಜೀವನದಲ್ಲಿ  ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹಬ್ಬದ ಸಮಯದಲ್ಲಿ ಪ್ರಕೃತಿಯು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಎಲ್ಲೆಡೆಯಲ್ಲೂ ಕಂಪು ಸೂಸುವ ಪುಷ್ಪಗಳು, ಕಾಯಿ ಮತ್ತು ಹಣ್ಣುಗಳ್ಳನ್ನು ಕಾಣಬಹುದು. ದೃಶ್ಯವು ಜನರ ಮನದಲ್ಲಿ ಹುರುಪನ್ನು ತುಂಬುತ್ತದೆಮನೆಯಲ್ಲಿ ಸಡಗರದ ವಾತಾವರಣ ನಿರ್ಮಿಸಿರುತ್ತದೆ. ಮನೆಯ ಸದಸ್ಯರೆಲ್ಲರೂ ದಿನ ಮುಂಜಾನೆ ಬೇಗನೆ ಎದ್ದು ಗೃಹವನ್ನು ಸ್ವಚ್ಛ ಗೊಳಿಸಿ, ಅಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸಿ, ಮನೆಯ ಬಾಗಿಲಿಗೇ ಹಸಿರು ತೋರಣ ಕಟ್ಟಿ ಮನೆಯನ್ನು ಅಲಂಕಾರ ಮಾಡುತ್ತಾರೆ.

ಯುಗಾದಿ ಹಬ್ಬದ ಮಹತ್ವ

ಹಿಂದೂ ಧರ್ಮಗ್ರಂಥಗಳ ಪ್ರಕಾರಸೃಷ್ಟಿಕರ್ತನಾದ ಬ್ರಹ್ಮದೇವನುಯುಗಾದಿಯ ದಿನದಂದು ಭೂಲೋಕವನ್ನು ಸೃಷ್ಟಿಮಾಡಲು ಪ್ರಾರಂಭಿಸಿದನುಪುರಾಣಗಳ ಪ್ರಕಾರ ಬ್ರಹ್ಮಾಂಡದ ರಕ್ಷಕನೆಂದು ಕರೆಯಲ್ಪಡುವ ಶ್ರೀಮನ್ ನಾರಾಯಣನ ಹಲವಾರು ನಾಮಗಳಲ್ಲಿ ಯುಗಾದಿಯು ಒಂದುನಾರಾಯಣನನ್ನು ಯುಗಾದಿಕೃತ ಅಂದರೆ ಯುಗಗಳ ನಿರ್ಮಾಣ ಮಾಡುವವನೆಂದು ಕರೆಯಲಾಗುತ್ತದೆಹಾಗಾಗಿ ಹಬ್ಬದಂದು ಸೃಷ್ಟಿಯ ರಚನೆ ಮಾಡಿದ ನಾರಾಯಣನನ್ನು ಮತ್ತು ಪರ ಬ್ರಹ್ಮನನ್ನು ನೆನೆಯುವ ದಿನವಾಗಿ ಆಚರಿಸಲಾಗುತ್ತದೆ


ಇದರ ಜೊತೆಗೆ, ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಕ್ರಿ.ಪೂ 18.02.3102 ರಲ್ಲಿ ಶ್ರೀ ಕೃಷ್ಣನು ಶುಕ್ಲ ಪಕ್ಷದ ಚೈತ್ರ ತಿಥಿಯಂದು ಮೋಕ್ಷವನ್ನು ಹೊಂದಿದನು ಮತ್ತು ಇದೆ ದಿನದಂದು ಕಲಿಯುಗ ಪ್ರಾರಂಭವಾಯಿತು

ಯುಗಾದಿ ಹಬ್ಬದ ಆಚರಣೆ

ಯುಗಾದಿಯಂದು ಮನೆ ಮಂದಿಯೆಲ್ಲಾ ಮುಂಜಾನೆ ಬೇಗನೆ ಎದ್ದು, ಎಣ್ಣೆ ಮಜ್ಜನ ಮಾಡಿ, ಶುಭ್ರವಾದ ಉಡುಪುಗಳ್ಳನ್ನು ತೊಟ್ಟು, ದೇವರ ಪೂಜೆಗೆ ಅಣಿಮಾಡಿಕೊಳ್ಳುತ್ತಾರೆ. ಮಲ್ಲಿಗೆ, ಸಂಪಿಗೆ ಮತ್ತು ಇನ್ನಿತರ ಹೂವುಗಳ ಮಾಲೆಯನ್ನೂ ಮಾಡಿ ಭಗವಂತನಿಗೆ ಅರ್ಪಿಸುತ್ತಾರೆ. ಗೃಹಿಣಿ ದೇವರ ನೈವೇದ್ಯಕ್ಕಾಗಿ ಯುಗಾದಿಯಂದು ವಿಶೇಷವಾದ ಭಕ್ಷ ಭೋಜನ ತಯಾರಿಸುತ್ತಾಳೆ. ಪೂಜೆ ಮುಗಿಸಿದ ನಂತರ ಪ್ರಸಾದವನ್ನು ಸ್ವೀಕರಿಸಿ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಹಬ್ಬದೂಟವನ್ನು ಸೇವಿಸುತ್ತಾರೆ. ದಿನ ಸಂಜೆ ಮನೆಮಂದಿಯಲ್ಲಾ ಕೂಡಿಕೊಂಡು ದೇವಾಲಯಗಳಿಗೆ ಭೇಟಿ ನೀಡುತ್ತಾರೇ ಮತ್ತು ದೇವರ ಕೃಪೆಗೆ ಪಾತ್ರರಾಗುತ್ತಾರೆ

ಹಬ್ಬವನ್ನು ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾಯೆಂದು ಆಚರಿಸಲಾಗುತ್ತದೆ. ಹಬ್ಬದಲ್ಲಿ ಬ್ರಹ್ಮ ಧ್ವಜವನ್ನು ಮನೆಯ ಮುಂಭಾಗದಲ್ಲಿ ನೆಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಗುಡಿ ಪಾಡ್ವಾ ಆಚರಿಸುವುದರ ಹಿಂದೆ ಇನ್ನೊಂದು ಕಥೆ ಇದೆ. ನಮ್ಮ ಪುರಾಣಗಳ ಪ್ರಕಾರ ಶ್ರೀ ರಾಮಚಂದ್ರನು ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವನ್ನು ಗುಡಿ ಪಾಡ್ವಾಯೆಂದು ಆಚರಿಸಲಾಗುತ್ತದೆ. ಶ್ರೀ ರಾಮನ ಪಟ್ಟಾಭಿಷೇಕದ ಸಮಯದಲ್ಲಿ ನೆಟ್ಟ ವಿಜಯ ಧ್ವಜದ ಸಂಕೇತವಾಗಿ ಗುಡಿ ಪಾಡ್ವಾ ದಿನದಂದು ಬ್ರಹ್ಮ ಧ್ವಜವನ್ನು ಮನೆಯ ಮುಂಭಾಗದಲ್ಲಿ ನೆಡಲಾಗುತ್ತದೆ


ಮಹಾರಾಷ್ಟ್ರದ ಜನತೆಗೆ ಹಬ್ಬ ಇನ್ನು ವಿಶೇಷತೆಯನ್ನು ಹೆಚ್ಚಿಸುತ್ತದೆ ಏಕೆಂದರೆ ಇದೇ ದಿನದಂದು ಮರಾಠ ಕುಲದ ಖ್ಯಾತ ನಾಯಕ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಸೈನ್ಯವನ್ನು ವಿಜಯದತ್ತ ಕೊಂಡೊಯ್ದರು ಮತ್ತು ಪ್ರದೇಶದ ಮೊಘಲರ ಪ್ರಾಬಲ್ಯದಿಂದ ರಾಜ್ಯಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಗುಡಿ ಆಗ ವಿಜಯ ಮತ್ತು ಸಮೃದ್ಧಿಯ ಸಂಕೇತವಾಗಿತ್ತು.
ಇದಲ್ಲದೆ, ನಮ್ಮ ಹಿರಿಯರ ಪ್ರಕಾರ ಮನೆಯ ಹೊರಗೆ ಗುಡಿ/ಬ್ರಹ್ಮ ಧ್ವಜವನ್ನು ಹಾರಿಸುವುದರಿಂದ ಯಾವುದೇ ದುಷ್ಟ ಪ್ರಭಾವಗಳು ಮನೆಯ ಒಳಗೆ ಬರುವುದಿಲ್ಲ, ಅದೃಷ್ಟ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ. ದಿನವೂ ಅತ್ಯಂತ ಶುಭ ದಿನವಾಗಿರುವುದರಿಂದ ಅನೇಕ ಉದ್ಯಮಿಗಳು ತಮ್ಮ ಉದ್ಯಮಗಳನ್ನು ಉದ್ಘಾಟಿಸುತ್ತಾರೆ, ಹೊಸ ವಾಹನಗಳನ್ನು  ಖರೀದಿಸುತ್ತಾರೆ ಹಾಗು ಮನೆಯ ಗೃಹ ಪ್ರವೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಯುಗಾದಿ ಹಬ್ಬದ ವಿಶೇಷತೆಗಳು

ಹಬ್ಬದಂದು ಬೇವು ಬೆಲ್ಲದ ಮಿಶ್ರಣ ವಿಶೇಷವಾಗಿ ತಯಾರಿಸುತ್ತಾರೆ. ಬೇವು ಬೆಲ್ಲ ಹಂಚುವುದರ ಮೂಲಕ ಮನೆಯ ಹಿರಿಯರು ಮಕ್ಕಳಿಗೆ ಜೀವನದ ಸ್ವಾರಸ್ಯವನ್ನು ತಿಳಿಸುತ್ತಾರೆ. ಜೀವನದಲ್ಲಿ ಸಿಹಿ ಮತ್ತು ಕಹಿ, ಸುಖ ಮತ್ತು ದುಃಖ ಎರಡು ಇರುತ್ತವೆ ಹಾಗಾಗಿ ಸುಖ ಬಂದಾಗ ಹಿಗ್ಗಬಾರದು, ಕಷ್ಟ ಬಂದಾಗ ಕುಗ್ಗ ಬಾರದು ಎಂಬುದು ಬೇವು ಬೆಲ್ಲದ ಸಂಕೇತವಾಗಿದೆ


ಆಂಧ್ರಪ್ರದೇಶದಲ್ಲಿ ಯುಗಾದಿ ಪಚ್ಚಡಿಯೆಂದು ಕರೆಯಲ್ಪಡುವ ಮಿಶ್ರಣದಲ್ಲಿ ಬೇವು ಬೆಲ್ಲದ ಜೊತೆಗೆ ಹುಣಸೆಹಣ್ಣು, ಮೆಣಸಿನ ಪುಡಿ, ತುರಿದ ಮಾವು, ಮತ್ತು ಉಪ್ಪನ್ನು ಸೇರಿಸುತ್ತಾರೆ. ಮಿಶ್ರಣದಲ್ಲಿರುವ ಪ್ರತಿಯೊಂದು ಅಂಶವು ಜೀವನದ ಸ್ವಾರಸ್ಯವನ್ನು ತಿಳಿಸುತ್ತವೆ. ಬೇವು ಕಷ್ಟಗಳನ್ನು ಸೂಚಿಸಿದರೆ ಬೆಲ್ಲ ಸಂತೋಷವನ್ನು, ಹುಳಿ ಸವಾಲುಗಳ ಸಂಕೇತವಾದರೆ ಅದರಲ್ಲಿರುವ ಮಾವಿನಕಾಯಿ ಜೀವನದಲ್ಲಿ ಬರುವ ಆಶ್ಚರ್ಯಗಳ್ಳನ್ನು ಮತ್ತು ಉಪ್ಪು ಜೀವನದಲ್ಲಿ ಆಸಕ್ತಿಯನ್ನು ಸೂಚಿಸುತ್ತವೆ.

ಯುಗಾದಿ ಹಬ್ಬದ ಇನ್ನೊಂದು ವಿಶೇಷತೆಯೆಂದರೆ ಪಂಚಾಂಗ ಶ್ರವಣ. ಸಂವತ್ಸರದ ಪಂಚಾಂಗವನ್ನು ಮೊದಲಬಾರಿಗೆ ಓದುವುದರ ಮೂಲಕ ವರುಷದ ರಾಶಿ ಫಲಗಳನ್ನು , ಮಳೆಯ ಆಗುಹೋಗುವಿಕೆಯನ್ನು ಮತ್ತು ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಪೂರನ್ ಪೋಳಿ ಅಂದರೆ ಹೂರಣದ ಹೋಳಿಗೆ ಯುಗಾದಿ ಹಬ್ಬದಂದು ವಿಶೇಷವಾಗಿ ತಯಾರಿಸುತ್ತಾರೆ.

ಎಲ್ಲಾ ವಿಶೇಷತೆಗಳಿಂದ ಕೂಡಿರುವ ಯುಗಾದಿ ಹಬ್ಬವು ಇನ್ನೇನು ಸಮೀಪಿಸುತ್ತಿದೆ ಆದ್ದರಿಂದ, ನಾವೆಲ್ಲರೂ ಹೊಸ ವರ್ಷವನ್ನು ಅಂದರೆ ಶ್ರೀ ಶಾರ್ವರಿ ನಾಮ ಸಂವತ್ಸರವನ್ನು ನಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸೇರಿ ಸ್ವಾಗತಿಸಲು ಸಿದ್ಧರಾಗೋಣ. ಸಂವತ್ಸರ ಎಲ್ಲರ ಬಾಳಲ್ಲಿ ಸುಖ, ಸಂತೋಷ, ಆಯುರ್, ಅರೋಗ್ಯ, ಸಿರಿ, ಸಂಪತ್ತಿನಿಂದ ತುಂಬಿರಲೆಂದು ಭಗವಂತನಲ್ಲಿ ನಾವು ಪ್ರಾರ್ಥಿಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

Penned By: Saroja Huddar

1 comments

Comment for Blog
EmoticonEmoticon