ಇತ್ತಿಚೀನ
ದಿನಗಳಲ್ಲಿ ಎಲ್ಲರ ನಿದ್ದೆಗೆಡಿಸಿರುವ ಒಂದು ಮಹಾಮಾರಿ ಅದುವೇ
Covid-19 ಅಥವಾ ಕೊರೊನಾ ವೈರಸ್. ಚೀನಾದ ವುಹಾನ್ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕೋವಿಡ್-19 ಏಕಾಏಕಿ ಚೀನಾದ ಹಲವಾರು ನಗರಗಳಲ್ಲಿ ಮತ್ತು ಇತರ ದೇಶಗಳಿಗೆ ಶೀಘ್ರವಾಗಿ
ಹರಡಿರುವುದರಿಂದ ಮಾನವ ಜೀವಕ್ಕೆ ಕುತ್ತುತಂದಿದೆ.
ಇಡೀ ಮಾನವ ಜನಾಂಗವನ್ನು ಉಳಿಸಲು
ಈ ವೈರಸ್ ಅನ್ನು ಹರಡುವುದರಿಂದ ತಡೆಗಟ್ಟುವುದು ಅತ್ಯಾವಶ್ಯಕವಾಗಿದೆ. ಈ ಲೇಖನದಲ್ಲಿ, ನಾವು
Covid-19 ವೈರಸ್‌ನ ಲಕ್ಷಣಗಳು ಮತ್ತು
ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ರೋಗಾಣುಗಳನ್ನು ಶರೀರದೊಳಗೆ ಹೋಗುವದರಿಂದ ತಡೆಗಟ್ಟ ಬಹುದು. ಆಲ್ಕೋಹಾಲ್ ಆಧಾರಿತ ಹ್ಯಾಂಡ್ವಾಶ್ ಅಥವಾ ಸಾಬೂನಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಈ ವೈರಸ್‌ನ ಹರಡುವಿಕೆಯನ್ನು ತಡೆಯುತ್ತದೆ. ಸೋಪ್ ಲಭ್ಯವಿಲ್ಲದಿದ್ದರೆ, 60% ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ ನಿಂದ ಕೈಗಳ್ಳನ್ನು ಶುಭ್ರಗೊಳಿಸಬಹುದು. ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆಯಿರಿ, ವಿಶೇಷವಾಗಿ ಕೆಮ್ಮಿದನಂತರ, ಸೀನಿದನಂತರ ಅಥವಾ ನೀವು ಯಾವುದೇ ಸಾರ್ವಜನಿಕ / ಜನದಟ್ಟಣೆಯ ಸ್ಥಳದಿಂದ ಹಿಂತಿರುಗಿದ ನಂತರ ಈ ಕ್ರಮ ಪಾಲಿಸುವುದು ಸಹಾಯಕವಾಗುತ್ತದೆ. ಇದನ್ನು ಅನುಸರಿಸುವ ಮೂಲಕ, ನಿಮ್ಮ ಕೈಯಲ್ಲಿರುವ ಎಲ್ಲಾ ವೈರಸ್ಗಳನ್ನು ಕೊಲ್ಲಬಹುದು ಹಾಗು ಈ ಮಹಾಮಾರಿ ಹರಡುವುದಕ್ಕೆ ಸಾಧ್ಯವಾಗದಂತೆ ಕಡಿವಾಣ ಹಾಕಬಹುದು.
ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟದಿರಿ
ಪ್ರತಿದಿನ ನಾವು ನಮ್ಮ ಕೈಯಿಂದ ಹಲವಾರು ವಸ್ತುಗಳ ಸ್ಪರ್ಶ ಮಾಡುತ್ತೇವೆ ಈ ಮೂಲಕ ಅದರ ಮೇಲಿರುವ ಕ್ರಿಮಿಗಳು ಮತ್ತು ವೈರಾಣುಗಳು ನಮ್ಮ ಕೈಗೆ ಅಂಟಿರುತ್ತವೆ. ಇದೇ ಕೈಗಳಿಂದ ನಾವು ನಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡಾಗ ವೈರಾಣುಗಳು ನಮ್ಮ ದೇಹವನ್ನು ಹೊಕ್ಕು ಶ್ವಾಸಕೋಶ ಹಾಗು ಇನ್ನಿತರ ಅಂಗಾಂಗಗಳನ್ನು ತಲುಪುತ್ತವೇ ಮತ್ತು ಅದಕ್ಕೆ ಹಾನಿ ಉಂಟು ಮಾಡುತ್ತವೆ.
ಸೀನುವಾಗ, ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್
ನಿಂದ ಬಾಯಿ ಮತ್ತು ಮೂಗನ್ನು
ಮುಚ್ಚಿಕೊಳ್ಳಿ
ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವುದು ಮತ್ತೊಂದು ಪ್ರಮುಖ ರಕ್ಷಣಾತ್ಮಕ ಕ್ರಮವಾಗಿದೆ. ನೀವು ಸೀನುವಾಗ ಅಥವಾ ಕೆಮ್ಮಿದಾಗಲೆಲ್ಲಾ, ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ನಿಂದ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಸಿದ ಟಿಶ್ಯೂ ಪೇಪರ ಅನ್ನು ತಕ್ಷಣ ಮುಚ್ಚಿದ ತೊಟ್ಟಿಯಲ್ಲಿ ವಿಲೇವಾರಿ ಮಾಡಿ ಮತ್ತು ಉತ್ತಮ ಡಿಟರ್ಜೆಂಟ್ನೊಂದಿಗೆ ಹ್ಯಾಂಕಿಯನ್ನು ತೊಳೆಯಿರಿ. ಮಡುಚಿದ ಮೊಣಕೈಯಲ್ಲಿ ಸೀನುವುದು ಅಥವಾ ಕೆಮ್ಮುವುದು ಸಹ ಉತ್ತಮ ಅಭ್ಯಾಸವಾಗಿದೆ. ಈ ಸರಳ ನೈರ್ಮಲ್ಯವನ್ನು ಅನುಸರಿಸುವ ಮೂಲಕ, ನಿಮ್ಮ ಪ್ರೀತಿಪಾತ್ರರನ್ನು ಮತ್ತು ನಿಮ್ಮ ಸುತ್ತಲಿನ ಇತರ ಜನರನ್ನು ಜ್ವರ, ಶೀತ ಮತ್ತು COVID-19ರ ಸೋಂಕಿಗೆ ಒಳಗಾಗದಂತೆ ನೋಡಿಕೊಳ್ಳಬಹುದು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ
Covid 19ನ ರೋಗ ಲಕ್ಷಣಗಳು ಸಾಮಾನ್ಯವಾಗಿ ಬರುವ ನೆಗಡಿ, ಸೀನು, ಕೆಮ್ಮಿನಂತೆ ಇದ್ದು, ಈ ರೋಗವು ಯಾರಲ್ಲಿ ಇದೆ ಎಂಬುದನ್ನು ಮೊದಲನೇ ಹಂತದಲ್ಲೇ ಪತ್ತೆಹಚ್ಚುವುದು ಸಾಕಷ್ಟು ಕಷ್ಟದ ಕೆಲಸ ಹಾಗಾಗಿ ಸೀನುತ್ತಿರುವ ಹಾಗು ಸತತವಾಗಿ ಕೆಮ್ಮುತ್ತಿರುವ ವ್ಯಕ್ತಿಗಳಿಂದ ನಮ್ಮನ್ನು ನಾವು ದೂರವಿಡೋಣ ಹಾಗು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ. ಹೀಗೆ ನಾವು ಮಾಡುವುದರಿಂದ, ಸೋಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಆ ರೋಗಾಣುಗಳು ನಮ್ಮನ್ನು ಆವರಿಸಿ ಕೊಳ್ಳುವುದಿಲ್ಲ.
ಅನಾವಶ್ಯಕವಾಗಿ ಮನೆಯಿಂದ ಹೊರ ಹೋಗದೆ ಮನೆಯಲ್ಲೇ
ಇರುವುದು
ಹೌದು, ಅನಾವಶ್ಯಕವಾಗಿ ಮನೆಯಿಂದ ಹೊರ ಹೋಗದೆ ಮನೆಯಲ್ಲೇ ಇರುವುದರಿಂದ ನಾವು ನಮ್ಮನ್ನು ಈ ಸೋಂಕಿಗೆ ಬಲಿ ಆಗದಂತೆ ನೋಡಿಕೊಳ್ಳಬಹುದು. ಅಷ್ಟಕ್ಕು ಮನೆಗಿಂತ ಸುರಕ್ಷಿತವಾದ ಮತ್ತು ಆರಾಮದಾಯಕವಾದ ಜಾಗ ಬೇರೊಂದಿಲ್ಲ ಎನ್ನುವುದನ್ನು ನೀವು ಕೂಡ ಒಪ್ಪುತೀರಾ ಅಲ್ವಾ? ಮೊದಲೇ ಹೇಳಿದ ಹಾಗೆ Covid 19ರ ಸೋಂಕಿತರನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ ಹಾಗಾಗಿ ಜನದಟ್ಟ ಪ್ರದೇಶದಲ್ಲಿ ಓಡಾಡುವುದರಿಂದ ಸೋಂಕು ಯಾವಾಗ ನಮ್ಮನ್ನು ಆವರಿಸುತ್ತದೆ ಎಂಬುದು ತಿಳಿಯುವುದಿಲ್ಲ. ಈ ರೋಗವು ಸುಲಭವಾಗಿ ಹರಡುವುದರಿಂದ ನಮ್ಮಿಂದ ನಮ್ಮ ಕುಟುಂಬದವರಿಗೂ ಈ ಸೋಂಕು ತಾಕುವ ಎಲ್ಲಾ ಸಾಧ್ಯತೆಗಳು ಉಂಟು. ಹಾಗಾಗಿ ನಾವು ಹೆಚ್ಚು ಜನರಿರುವ ಜಾಗದಿಂದ ದೂರವಿದ್ದು ನಮ್ಮ ಮತ್ತು ನಮ್ಮ ಮನೆಯವರ ಕಾಳಜಿವಹಿಸೋಣ.
ಪ್ರಯಾಣವನ್ನು ಮುಂದೂಡಿ
ಈ ಮಾರನಾಂತಿಕ ಕೊರೊನಾ ವೈರಸ್ ಇಡೀ ವಿಷವನ್ನೇ ನಡುಗಿಸಿದೆ ಹಾಗಾಗಿ ನೀವೇನಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಅದನ್ನು ದಯವಿಟ್ಟು ಮುಂದೂಡಿ. ಸರಕಾರದ ಮುಂದಿನ ಆದೇಶ ಬರುವವರೆಗು ನೀವಾಗಲಿ, ನಿಮ್ಮ ಮನೆಯವರಾಗಲಿ ಬೇರೆ ಸ್ಥಳಗಳಿಗೆ ಹೋಗುವುದರ ಬಗ್ಗೆ ವಿಚಾರ ಮಾಡದಿರಿ. ಎಲ್ಲಿಯವರೆಗೆ Covid 19 ರ ಆರ್ಭಟ ನಿಲ್ಲುವುದಿಲ್ಲವೋ, ಎಲ್ಲಿವರೆಗೆ ಈ ಸೋಂಕು ನಿಯಂತ್ರಣಕ್ಕೆ ಬರುವುದಿಲ್ಲವೋ ನೀವು ಬಸ್, ರೈಲು ಅಥವಾ ವಿಮಾನ ಪ್ರಯಾಣವನ್ನು ಮಾಡದಿರಿ.
ಕೊರೊನಾ
ರೋಗ ಲಕ್ಷಣಗಳು
ಒಬ್ಬ
ವ್ಯಕ್ತಿ ಕೊರೊನಾ ವೈರಸ್ನಿಂದ ಸೋಂಕಿತನಾಗಿದ್ದಾನೆ ಎಂದು ಅರಿಯಲು ಅದರ
ರೋಗ ಲಕ್ಷಣಗಳೆನೆಂಬುದನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ. ಮಾನವನ ದೇಹವು ಈ ವೈರಸ್‌ನ
ಸಂಪರ್ಕಕ್ಕೆ ಬಂದಾಗ, ಇದು ಮಧ್ಯಪ್ರಾಚ್ಯ ಉಸಿರಾಟದ
ಸಿಂಡ್ರೋಮ್ (MERS) ಮತ್ತು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ (SARS) ನಂತಹ ರೋಗಗಳನ್ನು ಎದುರಿಸುತ್ತದೆ.
ಈ ರೋಗವು ಇತರ ಉಸಿರಾಟದ ರೋಗಕಾರಕಗಳಂತೆ
ಉಸಿರಾಟದ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ
ಹರಡುತ್ತದೆ. ಪೀಡಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ, ಬಾಯಿ
ಅಥವಾ ಮೂಗಿನಿಂದ ಹೊರಬರುವ ಹನಿಗಳು ಮೇಲ್ಮೈ ಮೇಲೆ ಬೀಳುತ್ತವೆ ಮತ್ತು
ದೈಹಿಕ ಸಂಪರ್ಕದಿಂದ ಇತರರಿಗೆ ವರ್ಗಾಯಿಸಲ್ಪಡುತ್ತವೆ.
ಇದು
ಮುಖ್ಯವಾಗಿ ಮಾನವ ದೇಹದ ಉಸಿರಾಟದ
ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು
ಈ ರೋಗದ ಲಕ್ಷಣಗಳು. ಈ
ರೋಗಲಕ್ಷಣಗಳು ಸೋಂಕಿತ ವ್ಯಕ್ತಿಯಲ್ಲಿ ಕಂಡುಬರಲು ಸುಮಾರು 2 ರಿಂದ 15 ದಿನಗಳನ್ನು ತೆಗೆದುಕೊಳ್ಳಬಹುದು. ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕೆಲವು ವ್ಯಕ್ತಿಗಳು ವೈರಸನಿಂದ ಕೆಲಸಮಯದವರೆಗೆ ಅನಾರೋಗ್ಯಕ್ಕೆ ಒಳಗಾದರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ ಆದರೆ ದುರ್ಬಲ ರೋಗನಿರೋಧಕ
ಶಕ್ತಿ ಹೊಂದಿರುವ ಇತರರು ಗಂಭೀರ ಅನಾರೋಗ್ಯದಿಂದ ಬಳಲುತ್ತಾರೆ.
Covid-19 ವೈರಸ್‌ನಿಂದ ನಮ್ಮನ್ನು ನಾವು
ಸಂರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ರೋಗನಿರೋಧಕ ಕ್ರಮಗಳು
ಕೊರೊನಾ
ವೈರಸ್ನಂತಹ ಮಾರಣಾಂತಿಕ ಕಾಯಿಲೆಯಿಂದ ನಮನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ತೀರಾ ಅನಿವಾರ್ಯ.
ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ, ಯುರೋಪ್, ಇಟಲಿ, ಚೀನಾ ದಂತಹ ದೇಶಗಳು
ಈ ವೈರಸ್ಅನ್ನು ತಡೆಗಟ್ಟುವಲ್ಲಿ ಅಸಫಲವಾಗಿವೆ ಇದರ ಪರಿಣಾಮವಾಗಿ ನೂರಾರು
ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ
ಮತ್ತು ಸಾವಿರಾರು ಜನರು ಇನ್ನು ಅದರ
ಸೋಂಕಿಗೆ ಗುರಿಯಾಗಿದ್ದಾರೆ. ಉನ್ನತ ತಂತ್ರಜ್ಞಾನವನ್ನು ಹೊಂದಿರುವ ಈ ದೇಶಗಳ ಸ್ಥಿತಿ
ಹೀಗಿರುವಾಗ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತದಂತ ನಮ್ಮ ದೇಶದಲ್ಲಿ ಈ
ಕಾಯಿಲೆಯನ್ನು ಹರಡದಂತೆ ತಡೆಯುವುದೇ ಒಂದು ದೊಡ್ಡ ಸವಾಲುಯೆನ್ನುವುದರಲ್ಲಿ
ಸಂಶಯವೇಯಿಲ್ಲ.
ಆದರೆ
ಭಯಪಡಬೇಕಾಗಿಲ್ಲ, ಈ ಕೆಳಗಿನ ಸೂತ್ರಗಳನ್ನು
ಚಾಚೂತಪ್ಪದೆ ಪಾಲಿಸುವುದರಿಂದ, ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು:
ನಿಯಮಿತವಾಗಿ ಕೈಗಳ್ಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು
ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ರೋಗಾಣುಗಳನ್ನು ಶರೀರದೊಳಗೆ ಹೋಗುವದರಿಂದ ತಡೆಗಟ್ಟ ಬಹುದು. ಆಲ್ಕೋಹಾಲ್ ಆಧಾರಿತ ಹ್ಯಾಂಡ್ವಾಶ್ ಅಥವಾ ಸಾಬೂನಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಈ ವೈರಸ್‌ನ ಹರಡುವಿಕೆಯನ್ನು ತಡೆಯುತ್ತದೆ. ಸೋಪ್ ಲಭ್ಯವಿಲ್ಲದಿದ್ದರೆ, 60% ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ ನಿಂದ ಕೈಗಳ್ಳನ್ನು ಶುಭ್ರಗೊಳಿಸಬಹುದು. ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆಯಿರಿ, ವಿಶೇಷವಾಗಿ ಕೆಮ್ಮಿದನಂತರ, ಸೀನಿದನಂತರ ಅಥವಾ ನೀವು ಯಾವುದೇ ಸಾರ್ವಜನಿಕ / ಜನದಟ್ಟಣೆಯ ಸ್ಥಳದಿಂದ ಹಿಂತಿರುಗಿದ ನಂತರ ಈ ಕ್ರಮ ಪಾಲಿಸುವುದು ಸಹಾಯಕವಾಗುತ್ತದೆ. ಇದನ್ನು ಅನುಸರಿಸುವ ಮೂಲಕ, ನಿಮ್ಮ ಕೈಯಲ್ಲಿರುವ ಎಲ್ಲಾ ವೈರಸ್ಗಳನ್ನು ಕೊಲ್ಲಬಹುದು ಹಾಗು ಈ ಮಹಾಮಾರಿ ಹರಡುವುದಕ್ಕೆ ಸಾಧ್ಯವಾಗದಂತೆ ಕಡಿವಾಣ ಹಾಕಬಹುದು.
ಪ್ರತಿದಿನ ನಾವು ನಮ್ಮ ಕೈಯಿಂದ ಹಲವಾರು ವಸ್ತುಗಳ ಸ್ಪರ್ಶ ಮಾಡುತ್ತೇವೆ ಈ ಮೂಲಕ ಅದರ ಮೇಲಿರುವ ಕ್ರಿಮಿಗಳು ಮತ್ತು ವೈರಾಣುಗಳು ನಮ್ಮ ಕೈಗೆ ಅಂಟಿರುತ್ತವೆ. ಇದೇ ಕೈಗಳಿಂದ ನಾವು ನಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡಾಗ ವೈರಾಣುಗಳು ನಮ್ಮ ದೇಹವನ್ನು ಹೊಕ್ಕು ಶ್ವಾಸಕೋಶ ಹಾಗು ಇನ್ನಿತರ ಅಂಗಾಂಗಗಳನ್ನು ತಲುಪುತ್ತವೇ ಮತ್ತು ಅದಕ್ಕೆ ಹಾನಿ ಉಂಟು ಮಾಡುತ್ತವೆ.
ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವುದು ಮತ್ತೊಂದು ಪ್ರಮುಖ ರಕ್ಷಣಾತ್ಮಕ ಕ್ರಮವಾಗಿದೆ. ನೀವು ಸೀನುವಾಗ ಅಥವಾ ಕೆಮ್ಮಿದಾಗಲೆಲ್ಲಾ, ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ನಿಂದ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಸಿದ ಟಿಶ್ಯೂ ಪೇಪರ ಅನ್ನು ತಕ್ಷಣ ಮುಚ್ಚಿದ ತೊಟ್ಟಿಯಲ್ಲಿ ವಿಲೇವಾರಿ ಮಾಡಿ ಮತ್ತು ಉತ್ತಮ ಡಿಟರ್ಜೆಂಟ್ನೊಂದಿಗೆ ಹ್ಯಾಂಕಿಯನ್ನು ತೊಳೆಯಿರಿ. ಮಡುಚಿದ ಮೊಣಕೈಯಲ್ಲಿ ಸೀನುವುದು ಅಥವಾ ಕೆಮ್ಮುವುದು ಸಹ ಉತ್ತಮ ಅಭ್ಯಾಸವಾಗಿದೆ. ಈ ಸರಳ ನೈರ್ಮಲ್ಯವನ್ನು ಅನುಸರಿಸುವ ಮೂಲಕ, ನಿಮ್ಮ ಪ್ರೀತಿಪಾತ್ರರನ್ನು ಮತ್ತು ನಿಮ್ಮ ಸುತ್ತಲಿನ ಇತರ ಜನರನ್ನು ಜ್ವರ, ಶೀತ ಮತ್ತು COVID-19ರ ಸೋಂಕಿಗೆ ಒಳಗಾಗದಂತೆ ನೋಡಿಕೊಳ್ಳಬಹುದು.
Covid 19ನ ರೋಗ ಲಕ್ಷಣಗಳು ಸಾಮಾನ್ಯವಾಗಿ ಬರುವ ನೆಗಡಿ, ಸೀನು, ಕೆಮ್ಮಿನಂತೆ ಇದ್ದು, ಈ ರೋಗವು ಯಾರಲ್ಲಿ ಇದೆ ಎಂಬುದನ್ನು ಮೊದಲನೇ ಹಂತದಲ್ಲೇ ಪತ್ತೆಹಚ್ಚುವುದು ಸಾಕಷ್ಟು ಕಷ್ಟದ ಕೆಲಸ ಹಾಗಾಗಿ ಸೀನುತ್ತಿರುವ ಹಾಗು ಸತತವಾಗಿ ಕೆಮ್ಮುತ್ತಿರುವ ವ್ಯಕ್ತಿಗಳಿಂದ ನಮ್ಮನ್ನು ನಾವು ದೂರವಿಡೋಣ ಹಾಗು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ. ಹೀಗೆ ನಾವು ಮಾಡುವುದರಿಂದ, ಸೋಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಆ ರೋಗಾಣುಗಳು ನಮ್ಮನ್ನು ಆವರಿಸಿ ಕೊಳ್ಳುವುದಿಲ್ಲ.
ಹೌದು, ಅನಾವಶ್ಯಕವಾಗಿ ಮನೆಯಿಂದ ಹೊರ ಹೋಗದೆ ಮನೆಯಲ್ಲೇ ಇರುವುದರಿಂದ ನಾವು ನಮ್ಮನ್ನು ಈ ಸೋಂಕಿಗೆ ಬಲಿ ಆಗದಂತೆ ನೋಡಿಕೊಳ್ಳಬಹುದು. ಅಷ್ಟಕ್ಕು ಮನೆಗಿಂತ ಸುರಕ್ಷಿತವಾದ ಮತ್ತು ಆರಾಮದಾಯಕವಾದ ಜಾಗ ಬೇರೊಂದಿಲ್ಲ ಎನ್ನುವುದನ್ನು ನೀವು ಕೂಡ ಒಪ್ಪುತೀರಾ ಅಲ್ವಾ? ಮೊದಲೇ ಹೇಳಿದ ಹಾಗೆ Covid 19ರ ಸೋಂಕಿತರನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ ಹಾಗಾಗಿ ಜನದಟ್ಟ ಪ್ರದೇಶದಲ್ಲಿ ಓಡಾಡುವುದರಿಂದ ಸೋಂಕು ಯಾವಾಗ ನಮ್ಮನ್ನು ಆವರಿಸುತ್ತದೆ ಎಂಬುದು ತಿಳಿಯುವುದಿಲ್ಲ. ಈ ರೋಗವು ಸುಲಭವಾಗಿ ಹರಡುವುದರಿಂದ ನಮ್ಮಿಂದ ನಮ್ಮ ಕುಟುಂಬದವರಿಗೂ ಈ ಸೋಂಕು ತಾಕುವ ಎಲ್ಲಾ ಸಾಧ್ಯತೆಗಳು ಉಂಟು. ಹಾಗಾಗಿ ನಾವು ಹೆಚ್ಚು ಜನರಿರುವ ಜಾಗದಿಂದ ದೂರವಿದ್ದು ನಮ್ಮ ಮತ್ತು ನಮ್ಮ ಮನೆಯವರ ಕಾಳಜಿವಹಿಸೋಣ.
ಈ ಮಾರನಾಂತಿಕ ಕೊರೊನಾ ವೈರಸ್ ಇಡೀ ವಿಷವನ್ನೇ ನಡುಗಿಸಿದೆ ಹಾಗಾಗಿ ನೀವೇನಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಅದನ್ನು ದಯವಿಟ್ಟು ಮುಂದೂಡಿ. ಸರಕಾರದ ಮುಂದಿನ ಆದೇಶ ಬರುವವರೆಗು ನೀವಾಗಲಿ, ನಿಮ್ಮ ಮನೆಯವರಾಗಲಿ ಬೇರೆ ಸ್ಥಳಗಳಿಗೆ ಹೋಗುವುದರ ಬಗ್ಗೆ ವಿಚಾರ ಮಾಡದಿರಿ. ಎಲ್ಲಿಯವರೆಗೆ Covid 19 ರ ಆರ್ಭಟ ನಿಲ್ಲುವುದಿಲ್ಲವೋ, ಎಲ್ಲಿವರೆಗೆ ಈ ಸೋಂಕು ನಿಯಂತ್ರಣಕ್ಕೆ ಬರುವುದಿಲ್ಲವೋ ನೀವು ಬಸ್, ರೈಲು ಅಥವಾ ವಿಮಾನ ಪ್ರಯಾಣವನ್ನು ಮಾಡದಿರಿ.
ಈ ಮೇಲೆ ತಿಳಿಸಿದ ಕ್ರಮಗಳನ್ನು ನೀವು
ನಾವು ಸರಿಯಾಗಿ ಪಾಲಿಸುವುದರ ಮೂಲಕ, ಕೊರೊನಾ ವೈರಸ್ ಅನ್ನು ದೂರವಿಡೋಣ ಹಾಗು ಅದು ಒಬ್ಬರಿಂದ
ಒಬ್ಬರಿಗೆ ಹರಡುವುದನ್ನು ತಡೆಗಟ್ಟೋಣ.
Penned By: Saroja Huddar
Comment for Blog
EmoticonEmoticon