ಕರೋನವೈರಸ್ ವಿರುದ್ಧ ಭಾರತದ ಯುದ್ಧವು ಅನೇಕ ಅಡೆತಡೆಗಳನ್ನು ಹೊಂದಿದೆ - ದೊಡ್ಡ ಜನಸಂದಣಿ, ವಿಸ್ತರಿಸಿದ ಆರೋಗ್ಯ ವ್ಯವಸ್ಥೆ ಮತ್ತು ಅಸಮರ್ಪಕ ಮೂಲಸೌಕರ್ಯ - ಇದರ ಪರಿಣಾಮವಾಗಿ, ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಇದರ ಮಧ್ಯ, ಫೋನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ COVID-19ರ ಬಗ್ಗೆ ಹರಿದಾಡುತ್ತಿರುವ ತಪ್ಪು ಮಾಹಿತಿ ಮತ್ತು ವದಂತಿಯ ಅಲೆ, ಸರ್ಕಾರವನ್ನು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿವೆ.
ಭಾರತೀಯರ ಫೋನುಗಳು ವೈರಸ್ ಅನ್ನು ನಿಭಾಯಿಸಲು ಪರಿಶೀಲಿಸದ ಮನೆಮದ್ದುಗಳ ಪಟ್ಟಿ, ಐಸ್ ಕ್ರೀಮ್ ಮತ್ತು ಚಿಕನ್ ನಂತಹ ಆಹಾರಗಳನ್ನು ತಪ್ಪಿಸುವ ಸಲಹೆಗಳು ಮತ್ತು ಪಿತೂರಿ ಸಿದ್ಧಾಂತಗಳಿಂದ ತುಂಬಿ ಹೋಗುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಗಳನ್ನು ನಂಬುವವರು ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಭಾಗದಲ್ಲೂ ಇದ್ದಾರೆ. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳುವಂತೆ ಯುಕೆಯಲ್ಲಿ ಸುಮಾರು 40% ಜನರು ಕನಿಷ್ಠ ಒಂದು ರೀತಿಯ ಪಿತೂರಿ ಸಿದ್ಧಾಂತವನ್ನು ನಂಬುತ್ತಾರೆ. ಅಂಕಿಅಂಶಗಳ ಪ್ರಕಾರ ಈ ರೀತಿಯ ನಂಬಿಕೆ ಯುನೈಟೆಡ್ ಸ್ಟೇಟ್ಸ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂದು ತಿಳಿಸುತ್ತವೆ.
ಅವರ ಈ ಅಧ್ಯಯನವು ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್‌ನಿಂದ ಬೆಂಬಲಿತವಾಗಿದ್ದು, ಅವರು ಹೇಳುವ ಹಾಗೆ ಹೆದರಿಕೆಯ ಕಥೆಗಳು, ವದಂತಿಗಳು ಮತ್ತು ನೊರೊವೈರಸ್, ಜ್ವರ ಮತ್ತು ಮಂಕಿಪಾಕ್ಸ್‌ನಂತಹ ಕಾಯಿಲೆಗಳ ಬಗ್ಗೆ ಸುಳ್ಳು ಮಾಹಿತಿಯ ಪರಿಣಾಮವನ್ನು ಟ್ವಿಟರ್‌ನಂತಹ ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿ ನಂಬಿದ ಜನರು ತಮ್ಮನ್ನು ಮತ್ತು ಇತರರನ್ನು ರಕ್ಷಿಸುವ ರೀತಿಯನ್ನು ಪಾಲನೆಮಾಡದೆ ಇರುವುದು ಮತ್ತು ಸಾಂಕ್ರಾಮಿಕದಿಂದ ದೂರಉಳಿಯುವ ಮಾರ್ಗಗಳ್ಳನ್ನು ಪಾಲನೆ ಮಾಡದೇ ಇದ್ದದು ಕಂಡುಬಂದಿದೆ. ಉದಾಹರಣೆಗೆ: ಕೈಗಳನ್ನು ಆಗಾಗ್ಗೆ ತೊಳೆಯುವುದು ಮತ್ತು ಇತರ ರೋಗಲಕ್ಷಣಗಳು ಇದ್ದಲ್ಲಿ ಇತರ ಜನರಿಂದ ದೂರವಿರುವುದು. COVID-19ರ ವಿಷಯಕ್ಕೆ ಬಂದರೆ, ಈ ವೈರಸ್ ಹೇಗೆ ಹುಟ್ಟಿಕೊಂಡಿತು, ಅದು ಏನು ಉಂಟುಮಾಡುತ್ತದೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಉಹಾಪೋಹಗಳು, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ಕಂಡುಬಂದಿವೆ.
ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ನೊವೆಲ್ ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ಇಂತಹ ವಿಪ್ಪತ್ತಿನ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ಜನರ ಜೀವಕ್ಕೆ ಆಪತ್ತನ್ನು ತಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ನಕಲಿ ಸುದ್ದಿಗಳನ್ನು ಎದುರಿಸಲು ಎರಡು ಪರಿಣಾಮಕಾರಿ ತಂತ್ರಗಳನ್ನು ಸಂಶೋಧಕರು ಕಂಡುಹಿಡಿದುಕೊಂಡಿದ್ದಾರೆ. ಒಂದು ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿಯ ಪ್ರಮಾಣವನ್ನು ಕಡಿಮೆ ಮಾಡುವುದು. ಇನ್ನೊಂದು, ಸುಳ್ಳು ಮಾಹಿತಿಯನ್ನು ನೋಡಿದಾಗ ಅದನ್ನು ಗುರುತಿಸಲು ಜನರಿಗೆ ಶಿಕ್ಷಣ ನೀಡುವುದು.
ಎರಡೂ ತಂತ್ರಗಳು ಸ್ವಲ್ಪ ಯಶಸ್ಸನ್ನು ಕಂಡವು ಆದರೆ ನಾವು ಅತ್ಯಾಧುನಿಕ ಸಿಮ್ಯುಲೇಶನ್ ಮಾದರಿಗಳನ್ನು ಬಳಸುತ್ತಿದ್ದರೂ, ಇದು ನೈಜ ನಡವಳಿಕೆಯನ್ನು ಆಧರಿಸಿದ ವೀಕ್ಷಣಾ ಅಧ್ಯಯನವಲ್ಲ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಸಂಶೋಧಕರು ಹೇಳಿದರು.
ನಕಲಿ ಸುದ್ದಿಗಳ ವಿರುದ್ಧ ಹೋರಾಡಲು ಇಂತಹ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸುವ ಪರಿಣಾಮಕಾರಿತ್ವವನ್ನು ನೈಜ-ಪ್ರಪಂಚದ ಸೆಟ್ಟಿಂಗ್‌ಗಳಲ್ಲಿ ಪರೀಕ್ಷಿಸಬೇಕಾಗಿದೆ, ನೈಜ-ಪ್ರಪಂಚದ ರೋಗ ಕಡಿತಕ್ಕೆ ಹೋಲಿಸಿದರೆ ವೆಚ್ಚಗಳು ಮತ್ತು ಪ್ರಯೋಜನಗಳನ್ನು ಆದರ್ಶಪ್ರಾಯವಾಗಿ ಪರಿಗಣಿಸಲಾಗುತ್ತದೆ.
ಗೈ ಬರ್ಗರ್ ಯುನೆಸ್ಕೋದಲ್ಲಿ ಸಂವಹನ ಮತ್ತು ಮಾಹಿತಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರಗಳ ನಿರ್ದೇಶಕರಾಗಿದ್ದಾರೆ ಮತ್ತು ತಪ್ಪು ಮಾಹಿತಿಯ ವಿಷಯದ ಬಗ್ಗೆ ಏಜೆನ್ಸಿಯ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರು. COVID-19ರ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ಸುಳ್ಳುಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದು ಯುಎನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ವಿವರಿಸಿದರು.
COVID-19 ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಕರೋನವೈರಸ್ನ ಮೂಲದಿಂದ ದೃಡಿಕರಿಸಿದ 'ತಡೆಗಟ್ಟುವಿಕೆ ಮತ್ತು ಗುಣಪಡಿಸುವಿಕೆ' ವರೆಗಿನ ಜಾಹಿರಾತುಗಳು ಹಾಗು ಸರ್ಕಾರದಿಂದ ಮಾಹಿತಿಯನ್ನು ದೃಢಪಡಿಸಿಕೊಂಡು ಕಂಪನಿಗಳು ಮತ್ತು ಸೆಲೆಬ್ರಿಟಿಗಳು ಮಾಡುವ ಜಾಹಿರಾತುಗಳು ತಪ್ಪಲ್ಲಾ.
ವಿಪರ್ಯಾಸ್ಯವೆಂದರೆ ಪ್ರಭಾವಶಾಲಿ ಜನರನ್ನು ಒಳಗೊಂಡಿರುವ ತಪ್ಪು ಮಾಹಿತಿಯನ್ನು ಪುನರಾವರ್ತಿಸಿದಾಗ ಮತ್ತು ವರ್ಧಿಸಿದಾಗ, ಗಂಭೀರ ಅಪಾಯವನ್ನು ತಂದೋಡುತ್ತದೆ ಮತ್ತು ಸತ್ಯವನ್ನು ಆಧರಿಸಿದ ಮಾಹಿತಿಯು ಕೇವಲ ಅಲ್ಪ ಪ್ರಭಾವವನ್ನು ಹೊಂದಿರುತ್ತದೆ. ಹೆಚ್ಚಿನ ಭಯ ಮತ್ತು ಅನಿಶ್ಚಿತತೆಗಳ ಸಮಯದಲ್ಲಿ, ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಇನ್ನು ಸಾಕಷ್ಟು ಅವಕಾಶವಿದೆ. ಆದರೆ ದೊಡ್ಡ ಅಪಾಯವೆಂದರೆ ಆಕರ್ಷಿಸುವ ಯಾವುದೇ ಒಂದು ಸುಳ್ಳು ಕೂಡ ನಿಜವಾದ ಸಂಗತಿಗಳ ಮಹತ್ವವನ್ನು ಮುಚ್ಚಿಹಾಕುವಂತೆ ಮಾಡುತ್ತದೆ, ನಿರಾಕರಿಸುವಂತೆ ಮಾಡುತ್ತದೆ.
ಆನ್‌ಲೈನ್ ಮತ್ತು ಇತರೆಡೆ ಜನರಿಗೆ ಏನು ಪ್ರಸ್ತುತಪಡಿಸಲಾಗುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸುವಲ್ಲಿ ಸಹಾಯ ಮಾಡಲು ಯುನೆಸ್ಕೋ ಸಹ ಕೆಲಸ ಮಾಡುತ್ತಿದೆ, ಇದರಿಂದಾಗಿ ಅವರು ಸುಳ್ಳನ್ನು ನಂಬುವ ಮತ್ತು ಹರಡುವ ಸಾಧ್ಯತೆ ಕಡಿಮೆ. ಏಜೆನ್ಸಿ #ThinkBeforeSharing, #ThinkBeforeClicking, ಮತ್ತು #ShareKnowledge ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿಯ ಪ್ರವೇಶದ ಹಕ್ಕುಗಳು ತಪ್ಪು ಮಾಹಿತಿಯ ಅಪಾಯಗಳಿಗೆ ಉತ್ತಮ ಪರಿಹಾರವಾಗಿದೆ ಎಂಬ ಅಭಿಪ್ರಾಯವನ್ನು ಉತ್ತೇಜಿಸುತ್ತಿದೆ.
ಹಾಗಾಗಿ ದಯವಿಟ್ಟು ನಿಮ್ಮ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ COVID-19ರ ಬಗೆಗಿನ ಯಾವುದೇ ಸುದ್ದಿಗಳನ್ನು ಪರಿಶೀಲನೆ ಮಾಡದೇ ನಂಬಬೇಡಿ. ವದಂತಿಗಳಿಗೆ ಕಿವಿಗೊಡದಿರಿ, ನೀವು ಹೆದರದಿರಿ ಮತ್ತು ಸುತ್ತಲಿರುವವರನ್ನು ಹೆದರಿಸದಿರಿ.
Penned By: Saroja Huddar
Comment for Blog
EmoticonEmoticon