Saturday, April 18, 2020

ಆರೋಗ್ಯ ಸೇತು ಅಪ್ಲಿಕೇಶನ್

ವಿಶ್ವದಾದ್ಯಂತ ಅಲ್ಲೋಲಕಲ್ಲೋಲ ಶೃಷ್ಟಿಸಿರುವ ಮಹಾಮಾರಿ ಕೊರೊನಾ, ಎಲ್ಲರ ಜೀವನದಲ್ಲಿ ಬಿರುಗಾಳಿಯನ್ನೇ ಬೀಸಿದೆ. ಎಲ್ಲಿಂದ, ಯಾರಿಂದ ಹೇಗೆ ಹರಡುತ್ತದೆ ಎಂಬುದು ಸಂಶೋಧಕರಿಗೆ ಮತ್ತು ಇಡೀ ವೈದ್ಯ ಲೋಕಕ್ಕೆ ದೊಡ್ಡ ಸವಾಲಾಗಿದೆ.  ಇಂತಹ ಸಮಯದಲ್ಲಿ, ನಾವು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರು ನಮ್ಮ ನೆರೆಹೊರೆಯಲ್ಲಿ ಸೋಂಕಿತರಿದ್ದು ಅದರ ಮಾಹಿತಿ ನಮಗಿಲ್ಲದಿದ್ದರೆ ನಾವು ತೆಗೆದುಕೊಂಡ ಎಲ್ಲಾ ರೋಗ ನಿರೋಧಕ ಕ್ರಮಗಳು ವ್ಯರ್ಥವಾಗಿ ನಾವು ಕೂಡ COVID-19 ಕ್ಕೆ ಬಲಿಯಾಗುವುದರಲ್ಲಿ ಸಂಶಯೇವೆಯಿಲ್ಲ.


ಆದರೆ ಈಗ ನಾವು ಭಯಪಡಬೇಕಾಗಿಲ್ಲ ಏಕೆಂದರೆ ಭಾರತ ಸರಕಾರವು ಜನರ ಹಿತದೃಷ್ಟಿಯಿಂದ ಆರೋಗ್ಯ ಸೇತು ಎಂಬ ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿರುದ್ಧಿಪಡಿಸಿದೆ. 


ಏನಿದು ಆರೋಗ್ಯ ಸೇತು ಅಪ್ಲಿಕೇಶನ್?


COVID-19 ಎಂಬ ಭೀಕರ ರೋಗದಿಂದ ಜನರನ್ನು ಕಾಪಾಡಲು ಹಾಗು ಅವರಿಗೆ ನೆರವನುಂಟು ಮಾಡಲು ಭಾರತ ಸರ್ಕಾರದ ಆದೇಶದ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಮಾಹಿತಿ ಕೇಂದ್ರವು ಈ ಉಪಯುಕ್ತವಾದ ಆರೋಗ್ಯಾ ಸೇತು ಅಪ್ಪ್ಲಿಕೇಷನನ್ನು ಅಭಿವೃದ್ಧಿಪಡಿಸಿದ್ದು  ಇದು ಕೊರೊನಾ ವೈರಸನಿಂದ ಆಗುವ ಅಪಾಯಗಳು, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ಸಲಹೆಗಳ ಬಗ್ಗೆ ಬಳಕೆದಾರರಿಗೆ ಪೂರ್ವಭಾವಿಯಾಗಿ ತಿಳಿಸುತ್ತದೆ. ಭಾರತ ಸರ್ಕಾರದ, ವಿಶೇಷವಾಗಿ ಆರೋಗ್ಯ ಇಲಾಖೆಯ ಉಪಕ್ರಮಗಳನ್ನು ಹೆಚ್ಚಿಸುವ ಉದ್ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಣೆ ಘೋಷಿಸಿದರು. ಭಾಷಣದ ಸಮಯದಲ್ಲಿ ಪ್ರಧಾನಿಯವರು ಆರೋಗ್ಯ ಸೇತು ಅಪ್ಲಿಕೇಶನ್ ಬಗ್ಗೆ  ಪ್ರಸ್ತಾಪಿಸಿದರು ಮತ್ತು ಕೋವಿಡ್ -19ರ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಎಲ್ಲಾ ನಾಗರಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದರು.


ಈ ಅಪ್ಲಿಕೇಶನ್ ಹೇಗೆ ಮತ್ತು ಎಲ್ಲಿಂದ ಡೌನ್ಲೋಡ್ ಮಾಡಿಕೊಳ್ಳುವುದು?


ಈ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್‌ಗಳಿಗಾಗಿ ಗೂಗಲ್ ಪ್ಲೇಯಲ್ಲಿ ಮತ್ತು  ಐಒಎಸ್‌ಗಳಿಗಾಗಿ ಆಪಲ್ ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಆರೋಗ್ಯ ಸೇತು ಅಪ್ಲಿಕೇಶನ್ 10 ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷಿನಲ್ಲಿ ಅಂದರೆ ಒಟ್ಟು ಹನ್ನೊಂದು ಭಾಷೆಗಳಲ್ಲಿದೆ. 


ಆರೋಗ್ಯ ಸೇತುವಿನಲ್ಲಿ ದಾಖಲಾದ ಡೇಟಾವನ್ನು ಸರ್ಕಾರದೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಬಳಕೆದಾರನ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಅಪ್ಲಿಕೇಶನ್ ಅನುಮತಿಸುವುದಿಲ್ಲ.


ಅಪ್ಲಿಕೇಶನ್ ಬಳಸಲು ಅಗತ್ಯವಾದ ಹಂತಗಳು ಹೀಗಿವೆ:


1. ನೀವು ಅಪ್ಲಿಕೇಶನ್ ಅನ್ನು ಚಲಾಯಿಸಿದ ನಂತರ ಅಂದರೆ ರನ್ ಮಾಡಿದನಂತರ, ಕೇಳಿದಂತೆ ನಿಮ್ಮ ಮೊಬೈಲ್ ಸ್ಥಳವನ್ನು ಪ್ರವೇಶಿಸಲು ಅದನ್ನು ಅನುಮತಿಸಿ.

2. ನೀವು ಒಟಿಪಿ ಪಡೆಯುತ್ತೀರಿ, ಅದನ್ನು ನಮೂದಿಸಿ ಅಷ್ಟೇ. ನೀವು ಆರೋಗ್ಯ ಸೇತುವಿನ ಒಬ್ಬ ಜವಾಬ್ದಾರಿಯುತ ಸದಸ್ಯರಾಗುತ್ತೀರಿ. 


ಆರೋಗ್ಯ ಸೇತು ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ?


ಈ ಆಪ್ಲಿಕೇಷನ್ನ ನಿರ್ಮಾಣ ಬಳಕೆದಾರನಿಗೆ ಸೋಂಕಿತರ ಬಗ್ಗೆ ಮಾಹಿತಿ ನೀಡುವುದಕ್ಕಾಗಿದೆ. ನೀವು ನೆಲೆಸಿರುವ ಪ್ರದೇಶದಲ್ಲಿ ಯಾರಾದರೂ ಸೋಂಕಿತರಿದ್ದಾರೆಯೇ ಎಂಬುದನ್ನು ಈ ಅಪ್ಲಿಕೇಶನ್ ತಿಳಿಸುತ್ತದೆ. ಇದರಲ್ಲಿ ಟ್ರ್ಯಾಕಿಂಗ್ ಅನ್ನು ಬ್ಲೂಟೂತ್ ಮತ್ತು ಸ್ಥಳ-ರಚಿತ ಸಾಮಾಜಿಕ ಗ್ರಾಫ್ ಮೂಲಕ ಮಾಡಲಾಗುತ್ತದೆ, ಇದು ಕೊರೊನಾ ಸೋಂಕಿತರೊಂದಿಗೆ ನಿಮ್ಮ ಸಂವಹನವನ್ನು ತೋರಿಸುತ್ತದೆ.


ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಕೆಲವು ಅನುಮತಿಗಳನ್ನು ಒದಗಿಸುವಂತೆ ಕೇಳುತ್ತದೆ. ಬಳಕೆದಾರರ ಬಗ್ಗೆ ಡೇಟಾವನ್ನು ರಚಿಸಲು ಸಹಾಯ ಮಾಡುವ ಕೆಲವು ಮೂಲ ಮಾಹಿತಿಗಾಗಿ ಅಪ್ಲಿಕೇಶನ್ ವಿನಂತಿಸುತ್ತದೆ. ಮಾಹಿತಿಯು ವಯಸ್ಸು, ಲಿಂಗ, ಹೆಸರು, ಆರೋಗ್ಯ ಸ್ಥಿತಿಯನ್ನು ಒಳಗೊಂಡಿದೆ ಮತ್ತು ಕಳೆದ ಕೆಲವು ವಾರಗಳಲ್ಲಿ ಬಳಕೆದಾರರು ಇರುವ ದೇಶಗಳನ್ನು ಸಹ ಕೇಳುತ್ತದೆ. ವಿನಾಯಿತಿ ಪಡೆದ ಯಾವುದೇ ವೃತ್ತಿಪರರಿಗೆ ಬಳಕೆದಾರರು ಸೇರಿದ್ದಾರೆಯೇ ಎಂದು ಅಪ್ಲಿಕೇಶನ್ ಕೇಳುತ್ತದೆ. ಅಗತ್ಯವಿರುವ ಸಮಯದಲ್ಲಿ ಬಳಕೆದಾರರು ಸಹಾಯ ಮಾಡಲು ಸಿದ್ಧರಿದ್ದೀರಾ ಎಂದು ಅದು ಕೇಳುತ್ತದೆ. ಅದರ ಜೊತೆಗೆ ಬಳಕೆದಾರನಿಗೆ ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಇದೆಯೇ ಎಂದು ಕೇಳುತ್ತದೆ. ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಬಳಕೆದಾರನು ಹಸಿರು ವಲಯದಲ್ಲಿರುತ್ತಾನೆ.


ಈ ಅಪ್ಲಿಕೇಶನ್ ಬಳಕೆದಾರರಿಗೆ ಮೊಬೈಲ್ ಫೋನ್‌ನ ಬ್ಲೂಟೂತ್ ಮತ್ತು ಸ್ಥಳ ಸಾಧನಗಳನ್ನು ಆನ್ ಮಾಡಲು ಹೇಳುತ್ತದೆ. ಬಳಕೆದಾರರು ಕಿಕ್ಕಿರಿದ ಸ್ಥಳಕ್ಕೆ ಭೇಟಿ ನೀಡಿದಾಗಲೆಲ್ಲಾ, ಈ ಅಪ್ಲಿಕೇಶನ್ ಹತ್ತಿರದ ಮೊಬೈಲ್ ಫೋನ್‌ಗಳಿಂದ ಬ್ಲೂಟೂತ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತದೆ. ಬಳಕೆದಾರರು ಸಾಮಾನ್ಯ ವ್ಯಕ್ತಿಯ ಬಳಿ ನಿಂತಾಗ ಅದು ಹಸಿರು ವಲಯವನ್ನು ತೋರಿಸುತ್ತದೆ. ಆದರೆ ಆ ವ್ಯಕ್ತಿಯು ಕೆಲವು ದಿನಗಳ ನಂತರ ಕರೋನಾ ಪಾಸಿಟಿವ್ ಆಗಿದ್ದರೆ, ಈ ಅಪ್ಲಿಕೇಶನ್ ತಕ್ಷಣ ನಿಮ್ಮನ್ನು ಎಚ್ಚರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಳಕೆದಾರನು ತನ್ನನ್ನು ತಾನೇ ಪರಿಶೀಲಿಸಿಕೊಳ್ಳಬಹುದು. ಈ ಅಪ್ಲಿಕೇಶನ್ ಹಾಟ್‌ಸ್ಪಾಟ್‌ಗಳ ಬಗ್ಗೆ ಸಹ ಹೇಳುತ್ತದೆ, ಇದರಿಂದ ಬಳಕೆದಾರರು ಮಾರ್ಗವನ್ನು ಬದಲಾಯಿಸಬಹುದು.


ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿರುವ ಈ ಅಪ್ಲಿಕೇಶನ್ ಪ್ರತಿಯೊಬ್ಬ ಭಾರತೀಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಡಿಜಿಟಲ್ ಇಂಡಿಯಾದೊಂದಿಗೆ ಸಂಬಂಧ ಹೊಂದಿದೆ. ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, "ಈ ಅತ್ಯಾಧುನಿಕ ಅಪ್ಲಿಕೇಶನ್ ಇತರರೊಂದಿಗಿನ ಸಂವಹನ, ಬ್ಲೂಟೂತ್ ತಂತ್ರಜ್ಞಾನ, ಅಲ್ಗಾರಿದಮ್ ಮತ್ತು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಲೆಕ್ಕಾಚಾರಗಳನ್ನು ಮಾಡುತ್ತದೆ" ಎಂದು ಹೇಳಿದರು. ಪ್ರಾರಂಭವಾದಾಗಿನಿಂದ, ಆರೋಗ್ಯಾ ಸೇತು ಅಪ್ಲಿಕೇಶನ್ ಅನ್ನು ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.


ಹಾಗಾದರೆ ಇನ್ನೇಕೆ ತಡ, ನಿಮ್ಮ ಹಾಗು ಕುಟುಂಬದವರನ್ನು ರಕ್ಷಿಸಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ ಹಾಗಾಗಿ ಅರೋಗ್ಯ ಸೇತು ಅಪ್ಲಿಕೇಶನ್ ಅನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅದರ ಸಂಪೂರ್ಣ ಉಪಯೋಗವನ್ನು ತೆಗೆದುಕೊಳ್ಳಿ.  

Penned By: Saroja Huddar

Comment for Blog
EmoticonEmoticon